ಮಂಗಳೂರಿನ ಬಂದರಿನಲ್ಲಿ ಅಪರಿಚಿತ ಕಾರ್ಮಿಕನ ಕೊಲೆ

Spread the love

ಮಂಗಳೂರಿನ ಬಂದರಿನಲ್ಲಿ ಕಾರ್ಮಿಕನ ಕೊಲೆ

ಮಂಗಳೂರು : ತಮಿಳುನಾಡು ಮೂಲದ ಕಾರ್ಮಿಕನೋರ್ವನನ್ನು ಕೊಲೆ ಮಾಡಿರುವ ಘಟನೆ ಮಂಗಳೂರು ಬಂದರಿನಲ್ಲಿ ರವಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಸುಮಾರು 35 ವರ್ಷದ ತಮಿಳುನಾಡು ಮೂಲದ ಕಾರ್ಮಿಕ ಎಂದು ಗುರುತಿಸಲಾಗಿದ್ದು, ಕುಡಿದ ಮತ್ತಿನಲ್ಲಿ ಕಲ್ಲಿನಿಂದ ಜಜ್ಜಿ ಕೊಲೆಗೈಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರ್ಚ್ 17 ರಂದು ಬೆಳಿಗ್ಗೆ 9 ಗಂಟೆಗೆ ಮಂಗಳೂರು ಅಜಿಜುದ್ದೀನ್ ರಸ್ತೆ ಬದಿಯಲ್ಲಿರುವ ಟಿಂಪೋಗಳನ್ನು ಪಾರ್ಕಿಂಗ್ ಮಾಡಿರುವ ಸ್ಥಳದಲ್ಲಿ ಮಧ್ಯದಲ್ಲಿ 35 ರವಯಸ್ಸಿನ ಅಪರಿಚಿತ ವ್ಯಕ್ತಿಯ ಕೊಲೆಯಾಗಿದ್ದು ಮಾರ್ಚ್ 16ರ ಮಧ್ಯರಾತ್ರಿ ಯಾವುದೋ ಕಾರಣಕ್ಕಾಗಿ ವ್ಯಕ್ತಿಯನ್ನು ಕೊಲೆ ಮಾಡುವ ಉದ್ದೇಶಕ್ಕಾಗಿ ಮುಖಕ್ಕೆ ಹಾಗೂ ತಲೆಗೆ ಕಲ್ಲುಗಳನ್ನು ಎತ್ತಿ ಹಾಕಿ ಕೊಲೆ ಮಾಡಿದಂತೆ ಕಂಡು ಬಂದಿದೆ.

ಮೃತ ವ್ಯಕ್ತಿಯ ಎಡಕೈಯ ತೋಳಿನಲ್ಲಿ ಜಗ್ಗರಾವ್ ಎಂದು ಹಚ್ಚೆ ಹಾಕಲಾಗಿದ್ದು, ಸದೃಡ ಶರೀರ, ಗೋದಿ ಮೈಬಣ್ಣ ಹೊಂದಿರುತ್ತಾರೆ.

ಈತ ಬಗ್ಗೆ ಮಾಹಿತಿ ಇದ್ದಲ್ಲಿ ಮಂಗಳೂರ ದಕ್ಷಿಣ ಪೊಲೀಸ್ ಠಾಣೆ ಸಂಖ್ಯೆ 0824-2220518, 9480805333 ಅಥವಾ ನಗರ ನಿಯಂತ್ರಣ ಕೊಠಡಿ ಮಂಗಳೂರು ಸಂಖ್ಯೆ 0824-2220800 ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.


Spread the love