ಮಂಗಳೂರು: ʼಕಾವ್ಯಾಂ ವ್ಹಾಳೊ-3ʼ ಕೊಂಕಣಿ ಕವಿಗೋಷ್ಟಿ

Spread the love

ಮಂಗಳೂರು: ʼಕಾವ್ಯಾಂ ವ್ಹಾಳೊ-3ʼ ಕೊಂಕಣಿ ಕವಿಗೋಷ್ಟಿ

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ, ಅಕಾಡೆಮಿ ಸಭಾಂಗಣದಲ್ಲಿ ಜೂನ್ 07 ರಂದು ʼಕಾವ್ಯಾಂ ವ್ಹಾಳೊ-3ʼ ಶೀರ್ಷಿಕೆಯಡಿ ಕವಿಗೋಷ್ಟಿಯನ್ನು ಹಮ್ಮಿಕೊಂಡಿದೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ವಹಿಸಿಕೊಳ್ಳಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಮತ್ತು ಕವಿಗಳಾದ ನವೀನ್ ಕುಲ್ಶೇಕರ್ರವರನ್ನು ಸನ್ಮಾನಿಸಲಾಗುವುದು. ಸಾಹುಕಾರ್ ಕಿರಣ್ ಪೈರವರು ಮುಖ್ಯ ಅತಿಥಿಯಾಗಿ, ಖ್ಯಾತ ಕವಿ ಟೈಟಸ್ ನೊರೊನ್ಹಾರವರು ಪ್ರಮುಖ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.

ಡಾ. ಪ್ಲಾವಿಯಾ ಕ್ಯಾಸ್ತೆಲಿನೊರವರು ಈ ಕವಿಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಲಿರುವರು. ಮ್ಯಾಕ್ಸಿಂ ಲುದ್ರಿಗ್, ಸುಮಾ ವಸಂತ್, ಗೋಡ್ವಿನ್ ಪಿಂಟೊ, ಜೋರ್ಜ್ ಲಿಗೊರಿ, ಲೋಯ್ಡ್ ರೇಗೊ, ಅರವಿಂದ ಶ್ಯಾನಭಾಗ್, ಕು. ಚೆಲ್ಸಿಯಾ ಪರ್ಲ್ ಕ್ಯಾಸ್ತೆಲಿನೊ, ಸ್ಮಿತಾ ಶೆಣೈ, ರೋಶನ್ ಕ್ರಾಸ್ತಾ, ಐರಿನ್ ರೆಬೆಲ್ಲೊ ಮುಂತಾದವರು ತಮ್ಮ ಕವಿತೆಗಳನ್ನು ವಾಚಿಸುವರು.

ಕೊಂಕಣಿ ಭಾಂದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.


Spread the love