ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮುಂದುವರಿಯುತ್ತಿರುವ ನಿರಂತರ ಕಿರುಕುಳ :- ಎಸ್.ಡಿ.ಪಿ.ಐ ಖಂಡನೆ

Spread the love

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮುಂದುವರಿಯುತ್ತಿರುವ ನಿರಂತರ ಕಿರುಕುಳ :- ಎಸ್.ಡಿ.ಪಿ.ಐ ಖಂಡನೆ

ಮಂಗಳೂರು:- ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಮುಸ್ಲಿಂ ಸಮುದಾಯದ ಪ್ರಯಾಣಿಕರನ್ನು ಗುರಿಪಡಿಸಿ ಅನಗತ್ಯ ಕಿರುಕುಳ ನೀಡುತ್ತಿರುವ ವಿಮಾನ ನಿಲ್ದಾಣದ ಅಧಿಕಾರಿಗಳ ಕೋಮುವಾದಿ ಧೋರಣೆಯು ಖಂಡನೀಯವಾಗಿದೆ.

ಇAತಹ ಘಟನೆಗಳನ್ನು ಖಂಡಿಸಿ ಎಸ್.ಡಿ.ಪಿ.ಐ ಸಹಿತ ಅನೇಕ ಸಂಘಟನೆಗಳು ಹಲವಾರು ಬಾರಿ ಮನವಿ, ಪ್ರತಿಭಟನೆಗಳನ್ನು ಮಾಡಿದ ಸಂದರ್ಭಗಳಲ್ಲಿ ಆ ಸಮಯದಲ್ಲಿ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಮುಂದಿನ ದಿನಗಳಲ್ಲಿ ಈ ರೀತಿಯ ಸಮಸ್ಯೆಗಳು ಉದ್ಭವಿಸದಾಗೆ ನೋಡಿಕೊಳ್ಳುತ್ತೇವೆ ಎಂಬ ಭರವಸೆಯನ್ನು ಕೊಟ್ಟಿದ್ದರು. ಆದರೆ ಮತ್ತೆ ಕೂಡ ಪದೇ ಪದೇ ಇದೇ ರೀತಿಯ ಕಿರುಕುಳಗಳು ಮುಸ್ಲಿಮರನ್ನೇ ಗುರಿಪಡಿಸಿ ಮುಂದುವರಿಯುತ್ತಿದೆ. ಇದನ್ನು ಎಸ್.ಡಿ.ಪಿ.ಐ ಬಹಳಷ್ಟು ಗಂಭೀರವಾಗಿ ಪರಿಗಣಿಸಲಿದೆ.

ಈ ವಿಮಾನ ನಿಲ್ದಾಣದಿಂದ ಹೆಚ್ಚಾಗಿ ಮುಸ್ಲಿಂ ಪ್ರಯಾಣಿಕರೇ ಯಾತ್ರೆ ಮಾಡುತ್ತಿರುವುದರಿಂದ ಪ್ರಮುಖ ಆದಾಯದ ಮೂಲವು ಮುಸ್ಲಿಂ ಪ್ರಯಾಣಿಕರೇ ಆಗಿರುತ್ತಾರೆ. ಆದರೆ ಇಲ್ಲಿನ ಕೆಲವು ಅಧಿಕಾರಿಗಳ-ಕೆಲಸದಾಳುಗಳ ಕೋಮುವಾದಿ ಧೋರಣೆಯಿಂದಾಗಿ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆಯು ಕಡಿಮೆಯಾಗುತ್ತಿರುವುದು ಕಳವಳಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಈ ವಿಮಾನ ನಿಲ್ದಾಣ ಬಂದ್ ಆದರೂ ಕೂಡ ಆಶ್ಚರ್ಯ ಪಡಬೇಕಾಗಿಲ್ಲ. ಇದನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಗಂಭೀರವಾಗಿ ಪರಿಗಣಿಸಿ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ತೊಂದರೆಗಳಾದಲ್ಲಿ ಅಧಿಕ್ರತವಾಗಿ ಅಂತಹ ಅಧಿಕಾರಿಗಳ ಹೆಸರು, ವಿಳಾಸ, ಯಾರು, ಯಾವಾಗ, ಎಷ್ಟು ಗಂಟೆಗೆ ಹಾಗೂ ಇತರ ಸಂಪೂರ್ಣವಾದ ಮಾಹಿತಿಗಳೊಂದಿಗೆ ಎಸ್.ಡಿ.ಪಿ.ಐ ನಾಯಕರನ್ನು/ಕಛೇರಿಗೆ(ಎರಡನೇ ಮಹಡಿ, ವೆಸ್ಟ್ ಕೋಸ್ಟ್ ಬಿಲ್ಡಿಂಗ್, ನೆಲ್ಲಿಕಾಯಿ ರಸ್ತೆ, ಸ್ಟೇಟ್ ಬ್ಯಾಂಕ್ ಬಳಿ, ಮಂಗಳೂರು) ಸಂಪರ್ಕಿಸಬೇಕು. ನಾವು ಅದರ ವಿರುದ್ಧ ಕಾನೂನು ಕ್ರಮ ಮತ್ತು ಹೋರಾಟವನ್ನು ನಡೆಸಲಿದ್ದೇವೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪತ್ರಿಕಾ ಪ್ರಕಟಣೆಯ ಮೂಲಕ ಪ್ರಯಾಣಿಕರಿಗೆ ಮತ್ತು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ


Spread the love