ಮಂಗಳೂರು: ಆರೋಪ ಸಾಬೀತು ಪಡಿಸಲು ವಿಫಲ – ಪೋಕ್ಸೋ ಆರೋಪಿಯ ಬಿಡುಗಡೆ

Spread the love

ಮಂಗಳೂರು: ಆರೋಪ ಸಾಬೀತು ಪಡಿಸಲು ವಿಫಲ – ಪೋಕ್ಸೋ ಆರೋಪಿಯ ಬಿಡುಗಡೆ

ಮಂಗಳೂರು: ಆರೋಪವನ್ನು ಸಾಬೀತು ಪಡಿಸಲು ಸಾಧ್ಯವಾಗದ ಕಾರಣ ಪೋಕ್ಸೊ ಆರೋಪಿಯೊಬ್ಬನನ್ನು ಬಿಡುಗಡೆಗೊಳಿಸಿ ದ.ಕ ಜಿಲ್ಲಾ ೨ನೇ ಹೆಚ್ಚುವರಿ ನ್ಯಾಯಾಲಯ ಆದೇಶ ಜಾರಿ ಮಾಡಿದೆ

ಈ ಪ್ರಕರಣದಲ್ಲಿ ಆಪಾದಿತ ಕಿರಣ್ ಎಂಬಾತನು ಅಪ್ರಾಪ್ತ ವಯಸ್ಸಿನ ನೊಂದ ಬಾಲಕಿ ಯನ್ನು “ ಪ್ರೀತಿ ಮಾಡುತ್ತಿದ್ದು, ಮದುವೆಯಾಗುತ್ತೇನೆ” ಎಂದು ನಂಬಿಸಿ ನೊಂದ ಬಾಲಕಿಯನ್ನು 2022 ರ ಜೂನ್ 13 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರು ತಾಲೂಕು ಬಜಪೆ ಗ್ರಾಮದ ಬಜಪೆ ಬಸ್ಸು ನಿಲ್ದಾಣದ ಬಳಿ ಕರೆಸಿ ಬಾಲಕಿಯನ್ನು ಪುಸಲಾಯಿಸಿ ಮಂಗಳೂರು ತಾಲೂಕು ಮೂಡುಪೆರಾರ ಗ್ರಾಮದ ಅರ್ಕೆಪದವು ಎಂಬಲ್ಲಿರುವ ಮನೆಗೆ ಕರೆದುಕೊಂಡು ಹೋಗಿ ನೊಂದ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ 3 ದಿನ ಅವಳ ಜೊತೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿರುತ್ತಾನೆ ಎಂದು ಆರೋಪಿ ವಿರುದ್ದ ನೀಡಿದ ದೂರಿನನ್ವಯ ಬಜಪೆ ಪೊಲೀಸರು ಅತ್ಯಾಚಾರ ಮತ್ತು ಪೋಕ್ಸೋ ರಂತೆ ಪ್ರಕರಣ ದಾಖಲಿಸಿದ್ದರು.

ಮಂಗಳೂರು ನ್ಯಾಯಾಲಯದಲ್ಲಿ ಆರೋಪಿಯ ವಿರುದ್ದ ತನಿಕೆ ನಡೆಸಿ ಸಾಕ್ಷಿದಾರರನ್ನು ತನಿಖೆಮಾಡಿ ವಾದ ವಿವಾದ ಗಳನ್ನು ಆಲಿಸಿದ ದ.ಕ ಜಿಲ್ಲಾ 2ನೇ ಹೆಚ್ಚುವರಿ ನ್ಯಾಯಾಧೀಶರಾದ ಮನು.ಕೆ ರವರು ಆರೋಪಿಯ ವಿರುದ್ದ ಕೇಸನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಆರೋಪಿಯನ್ನು ಕೇಸಿನಿಂದ ಮುಕ್ತಗೊಳಿಸಿ ಬಿಡುಗಡೆ ಮಾಡಿರುತ್ತಾರೆ.

ಆರೋಪಿಯ ಪರವಾಗಿ ಜಿ.ವಾಸುದೇವ ಗೌಡ ಮುಖ್ಯ ಕಾನೂನು ನೆರವು ಮಂಗಳೂರು ಇವರು ವಾದಿಸಿದ್ದರು.


Spread the love
Subscribe
Notify of

0 Comments
Inline Feedbacks
View all comments