ಮಂಗಳೂರು : ಗೋರಕ್ಷಕರಿಗೆ ರಕ್ಷಣೆ ಒದಗಿಸಿರಿ – ಕುಮಾರ್ ಮಾಲೇಮಾರ್

Spread the love

ಮಂಗಳೂರು : ಗೋರಕ್ಷಕರಿಗೆ ರಕ್ಷಣೆ ಒದಗಿಸಬೇಕು, ಗೋರಕ್ಷಕರ ಸ್ವರಕ್ಷಣೆಗಾಗಿ ಶಸ್ತ್ರ ಗಳನ್ನು ಇಟ್ಟುಕೊಳ್ಳನ್ನು ಅನುಮತಿ ನೀಡಬೇಕು ಮತ್ತು ಬೆಳಗಾವಿಯ ಲೋಂಡಾದಲ್ಲಿ ಶ್ರೀರಾಮಸೇನೆಯ ಕಾರ್ಯಕ್ರಮದ ಮೇಲೆ ಮುಸಲ್ಮಾನರ ದಾಳಿಯನ್ನು ಖಂಡಿಸಿ ಮಂಗಳೂರು ಜಿಲ್ಲಾಧಿಕಾರಿ ಕಛೇರಿ ಎದುರು ನವೆಂಬರ 8 ರಂದು ರಾಷ್ಟ್ರೀಯ ಹಿಂದೂ ಆಂದೋಲವನ್ನು ನಡೆಸಲಾಯಿತು.

ಹಿಂದೂ ಮಹಾಸಭಾದ ರಾಜ್ಯ ವಕ್ತಾರರದ ಶ್ರೀ. ಧಮೇಂದ್ರ ಇವರು ಮಾತನಾಡುತ್ತಾ ಶಿವಾಜಿ ಮಾಹಾರಾಜ, ವೀರಸಾವರ್ಕರ ಮುಂತಾದ ವೀರ ಪುರುಷರ ಜಯಂತಿಯನ್ನು ಆಚರಿಸುವ ಬದಲು ಕರ್ನಾಟಕ ಕಾಂಗ್ರೆಸ್ ಸರಕಾರ ಧರ್ಮದ್ರೋಹಿ, ದೇಶ ದ್ರೋಹಿ ಟಿಪ್ಪು ಸುಲ್ತಾನನ ಜಯಂತಿ ಆಚರಣೆಯನ್ನು ಮಾಡಲು ಹೊರಟಿದೆ. ಇದು ಖಂಡನೀಯ. ಒಂದು ವೇಳೆ ಸರ್ಕಾರ ಆಚರಿಸಿದ್ದೇ ಆದರೆ ಅದರ ಪರಿಣಾಮ ಅನುಭವಿಸಬೇಕಾಗಬಹುದು ಎಂದರು.

ಶ್ರೀರಾಮಸೇನೆಯ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಶ್ರೀ.ಕುಮಾರ್ ಮಾಲೆಮಾರ್ ಮಾತನಾಡುತ್ತಾ ಇವತ್ತು ಗೋರಕ್ಷಣೆ ಮಾಡುವರಿರಗೆ ರಕ್ಷಣೆ ಇಲ್ಲ ಆದರೆ ಗೋಹತ್ಯೆ ಮಾಡುವವರಿಗೆ ಸರಕಾರ ರಕ್ಷಣೆ ಒದಗಿಸಿ ಕೊಡುತ್ತಿದೆ. ಒಬ್ಬ ಹಿಂದೂ ನೇತಾರ ಪ್ರಶಾಂತ ಪೂಜಾರಿಯ ಹತ್ಯೆಯ ಹಿಂದೆ ದೊಡ್ಡ ರಾಜಕಾರಣಿಗಳ ಕೈವಾಡವಿದೆ, ಇದರ ಪ್ರಾಮಾಣಿಕ ತನಿಖೆ ಆಗಬೇಕು ಮತ್ತು ರಾಜ್ಯದಲ್ಲಿ ಶ್ರೀರಾಮಸೇನೆಯ ಕಾರ್ಯಕರ್ತರ ಮೇಲೆ ನಡೆಯುವ ದೌರ್ಜನ್ಯ ವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕರಾದ ಶ್ರೀ. ವಿಜಯಕುಮಾರ್ ಮಾತನಾಡುತ್ತಾ ಕಳೆದ ಕೆಲವು ತಿಂಗಳುಗಳಿಂದ ಕರ್ನಾಟಕದಲ್ಲಿ ಅಲ್ಪಸಂಖ್ಯಾತ ಸಮೂಹದಿಂದ ಹಿಂಸಾತ್ಮಾಕ ಕೃತ್ಯಗಳು ನಡೆಯುತ್ತಿದ್ದು ಮತೀಯ ಗಲಭೆ ಎಬ್ಬಿಸುವುದು, ಹಿಂದೂಗಳ ಮೇಲೆ ಪ್ರಾಣಘಾತಕ ಹಲ್ಲೆ ನಡೆಸುವುದು ಹೆಚ್ಚಾಗುತ್ತಿದೆ. ಅಧಿಕಾರಿಗಳು ಕಾನೂನು ಪಾಲನೆ ಮಾಡುವ ಬದಲು ಅಧಿಕಾರವನ್ನು ದುರುಪಯೋಗ ಪಡಿಸಿ ಹಿಂದೂ ಸಮಾಜವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅವರ ಮೇಲೆ ಅನ್ಯಾಯ ಮಾಡುತ್ತಿದ್ದಾರೆ. ನಿರಪರಾಧಿ ಶ್ರೀರಾಮಸೇನೆಯ ಕಾರ್ಯಕರ್ತರ ಮೇಲೆ ಅಪರಾಧಗಳನ್ನು ದಾಖಲಿಸಿ ಅವರನ್ನು ಸೆರೆಮನೆಯಲ್ಲಿ ಇಡಲಾಗುತ್ತದೆ. ಬೆಳಗಾವಿ ಲೋಂಡಾದಲ್ಲಿ ಶ್ರೀ ರಾಮಸೇನೆ ಕಾರ್ಯಕ್ರಮದ ಮೇಲೆ ಮಸಲ್ಮಾನರು ದಾಳಿ ಮಾಡಿದ ಘಟನೆ ಖಂಡನೀಯ ಎಂದರು. ಈ ಸಂದರ್ಭದಲ್ಲಿ ಹಿಂದೂದ್ರೋಹಿ, ದೇಶದ್ರೋಹಿ ಅತ್ಯಾಚಾರಿ, ಕ್ರೂರಿ, ಲಕ್ಷಾಂತರ ಹಿಂದೂಗಳ ಹತ್ಯೆಗೈದ, ಹಿಂದೂಗಳನ್ನು ಬಲವಂತವಾಗಿ ಮತಾಂತರಿಸಿದ, ಸಾವಿರಾರು ದೇವಸ್ಥಾನಗಳನ್ನು ಧ್ವಂಸಗೊಳಿಸಿದ ಟಿಪ್ಪು ಸುಲ್ತಾನನ್ನು ವೈಭವೀಕರಣ ಮಾಡಿ ಕರ್ನಾಟಕ ಕಾಂಗ್ರೆಸ್ ಸರಕಾರ ಟಿಪ್ಪು ಸುಲ್ತಾನ ಜಯಂತಿ ಆಚರಣೆ ಮಾಡುವುದನ್ನು ಖಂಡಿಸಲಾಯಿತು.


Spread the love