ಮಂಗಳೂರು : ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷಾ ಸಹಾಯವಾಣಿ

Spread the love

ಮಂಗಳೂರು : ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷಾ ಸಹಾಯವಾಣಿ

ಮಂಗಳೂರು : ಜೂನ್ 25 ರಿಂದ ಜುಲೈ 4 ರವರೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯು ನಡೆಯಲಿರುವುದರಿಂದ ಮಕ್ಕಳು ಮತ್ತು ಪೋಷಕರು ಪರೀಕ್ಷೆಯ ಬಗ್ಗೆ ಮಾಹಿತಿ ಪಡೆಯಲು ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷಾ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ.

ಪ್ರತಿದಿನ (ಸರಕಾರಿ ರಜಾದಿನಗಳನ್ನು ಹೊರತು ಪಡಿಸಿ) ಕಚೇರಿ ಸಮಯದಲ್ಲಿ ಬೆಳಿಗ್ಗೆ 9.30 ಗಂಟೆಯಿಂದ ಮಧ್ಯಾಹ್ನ 5.30 ಗಂಟೆಯವರೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಸಂದೇಹಗಳಿದ್ದಲ್ಲಿ ದೂರವಾಣಿಯನ್ನು ಸಂಪರ್ಕಿಸಬಹುದು.

ಈ ಸಹಾಯವಾಣಿಗಳು ಜೂನ್ 8 ರಿಂದ ಚಾಲ್ತಿಯಲ್ಲಿರುತ್ತವೆ. ಜಿಲ್ಲಾ ಕೇಂದ್ರದ ಸಹಾಯವಾಣಿ ಸಂಖ್ಯೆ 180042511017 ಹಾಗೂ ಮೊಬೈಲ್ ಸಂಖ್ಯೆ 9845651353 ನ್ನು ಸಂಪರ್ಕಿಸಬಹುದು.

ತಾಲೂಕು ಕೇಂದ್ರಗಳ ಸಹಾಯವಾಣಿಗಳು ಇಂತಿವೆ:- ಬಂಟ್ವಾಳ ದೂರವಾಣಿ ಸಂಖ್ಯೆ 08255-232579, ಮೊಬೈಲ್ ಸಂಖ್ಯೆ 9449020453, ಬೆಳ್ತಂಗಡಿ ದೂರವಾಣಿ ಸಂಖ್ಯೆ 08256-232004 ಮೊಬೈಲ್ ಸಂಖ್ಯೆ 9008763829, ಮಂಗಳೂರು ಉತ್ತರ ದೂರವಾಣಿ ಸಂಖ್ಯೆ 0824-2423627 ಮೊಬೈಲ್ ಸಂಖ್ಯೆ 9449946810, ಮಂಗಳೂರು ದಕ್ಷಿಣ ದೂರವಾಣಿ ಸಂಖ್ಯೆ 0824-2451250 ಮೊಬೈಲ್ ಸಂಖ್ಯೆ 9740028090, ಮೂಡಬಿದಿರೆ ದೂರವಾಣಿ 08258-236461 ಮೊಬೈಲ್ ಸಂಖ್ಯೆ 9483157533, ಪುತ್ತೂರು ದೂರವಾಣಿ ಸಂಖ್ಯೆ 08251-230827, ಮೊಬೈಲ್ ಸಂಖ್ಯೆ 7619564178, ಸುಳ್ಯ ದೂರವಾಣಿ 08257-230419 ಮೊಬೈಲ್ ಸಂಖ್ಯೆ 9481720143 ನ್ನು ಸಂಪರ್ಕಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ತಮಗೆ ಬೇಕಾಗಿರುವ ಅಗತ್ಯ ಮಾಹಿತಿಯನ್ನು ಪಡೆಯುವಂತೆ ಮಂಗಳೂರು (ಆಡಳಿತ) ಉಪನಿರ್ದೇಶಕ ಪ್ರಕಟಣೆ ತಿಳಿಸಿದೆ.


Spread the love