ಮಂಗಳೂರು ಜೈಲಿನಲ್ಲಿ ಕೈದಿಗಳ ಮಾರಾಮಾರಿ, ಕಲ್ಲು ತೂರಾಟ

Spread the love

ಮಂಗಳೂರು ಜೈಲಿನಲ್ಲಿ ಕೈದಿಗಳ ಮಾರಾಮಾರಿ, ಕಲ್ಲು ತೂರಾಟ

ಮಂಗಳೂರು: ನಗರದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ನಡುವೆ ಮಾರಾಮಾರಿ ನಡೆದಿದೆ.

ಸಂಜೆ ಚಹಾ ವಿರಾಮ ವೇಳೆ ಕೈದಿಗಳನ್ನು ಬಿಟ್ಟಾಗ ಎರಡು ಗುಂಪುಗಳ ನಡುವೆ ಸಂಘರ್ಷ ನಡೆದಿದೆ.

ಎರಡು ಗುಂಪುಗಳ ಕೈದಿಗಳು ಕಲ್ಲು ತೂರಾಟ ನಡೆಸಿ, ಪರಸ್ಪರ ಹೊಡೆದಾಡಿಕೊಂಡರು. ಈ ಸಂದರ್ಭದಲ್ಲಿ ಪೊಲೀಸರು ಧಾವಿಸಿದಾಗ ಅವರ ಮೇಲೂ ಕಲ್ಲು ತೂರಲಾಯಿತು.

ಜೈಲಿನ ಒಳಗಡೆ ಅಡುಗೆಗೆ ಬಳಸಲು ಇದ್ದ ಮೆಣಸಿನಪುಡಿಯನ್ನು ಪೊಲೀಸರ ಕಣ್ಣಿಗೆ ಕೈದಿಗಳು ಎರಚಿದ್ದಾರೆ.

ಈ ಘಟನೆಯಲ್ಲಿ ಇಬ್ಬರು ಕೈದಿಗಳು, ಪೊಲೀಸರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಹಿಂದೆಯೂ ಈ ಜೈಲಿನಲ್ಲಿ ಕೈದಿಗಳ ನಡುವೆ ಮಾರಾಮಾರಿ ನಡೆದಿತ್ತು, ಕೊಲೆಗಳು ನಡೆದಿತ್ತು.


Spread the love