ಮಂಗಳೂರು: ದ್ವಿಚಕ್ರ ವಾಹನಕ್ಕೆ ಬಸ್ಸು ಡಿಕ್ಕಿ ; ಮಹಿಳೆ ಸಾವು

Spread the love

ಮಂಗಳೂರು: ದ್ವಿಚಕ್ರ ವಾಹನ ಮತ್ತು ಬಸ್ಸಿನ ನಡುವೆ ರಸ್ತೆ ಅಫಘಾತದಲ್ಲಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಟೌನ್ಹಾಲ್ ಬಳಿ ಶನಿವಾರ ನಡೆದಿದೆ.

accident_b accident_a

ಮೃತ ಮಹಿಳೆಯನ್ನು ವಾಮಂಜೂರು ನಿವಾಸಿ ಕೃಷ್ಣ ಗಟ್ಟಿ ಅವರ ಪತ್ನಿ ಪ್ರೇಮ (56) ಎಂದು ಗುರುತಿಸಲಾಗಿದೆ.
ಪ್ರೇಮ ಮತ್ತು ಕೃಷ್ಣ ಅವರು ತಮ್ಮ ಹೋಂಡಾ ಆಕ್ಟಿವಾ ವಾಹನದಲ್ಲಿ ಸೆಂಟ್ರಲ್ ಮಾರ್ಕೆಟ್ ಕಡೆ ತೆರಳುತ್ತಿದ್ದ ವೇಳೆ ಸಿಟಿ ಬಸ್ಸು ಸಂಖ್ಯೆ 13 ವೇಗದಲ್ಲಿ ಬಂದು ಆಕ್ಟಿವಾಗೆ ಡಿಕ್ಕಿ ಹೊಡೆದ್ದಿದ್ದು, ಕೃಷ್ಣ ಮತ್ತು ಪ್ರೇಮ ರಸ್ತೆಗೆ ಬಿದ್ದರು. ಈ ವೇಳೆ ಬಸ್ಸಿನ ಚಕ್ರವು ಪ್ರೇಮ ಅವರ ಮೇಲೆ ಹರಿದಿದ್ದು ಸ್ಥಳದಲ್ಲೆ ಮೃತಪಟ್ಟರು. ಕೃಷ್ಣ ಗಟ್ಟಿ ಸಣ್ಣಪುಟ್ಟ ಗಾಯಗೊಳೊಂದಿಗೆ ಪಾರಾಗಿದ್ದಾರೆ.

ಪ್ರೇಮ ಅವರು ಎರಡು ಗಂಡು ಹಾಗೂ ಒರ್ವ ಹೆಣ್ಣು ಮಗುವನ್ನು ಅಗಲಿದ್ದು, ಒರ್ವ ಮಗ ಚಂದ್ರಮೋಹನ ಪೋಲಿಸ್ ಅಧಿಕಾರಿಯಾಗಿದ್ದಾರೆ. ಪ್ರೇಮ ಅವರು ಬಜ್ಪೆ ಗ್ರಾಮಪಂಚಾಯತಿನ ಸದಸ್ಯೆಯಾಗಿದ್ದರು.
ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.


Spread the love