ಮಂಗಳೂರು: ಬೆಳಪು ವಿವಿ ಸಂಶೋಧನಾ ಕೇಂದ್ರಕ್ಕೆ ಮೇ 4 ರಂದು ಸಿಎಂ ಶಿಲಾನ್ಯಾಸ

Spread the love

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯವು ಕರ್ನಾಟಕ ಸರಕಾರದ ಅನುಮತಿಯ ಮೇರೆಗೆ ಉಡುಪಿ ಜಿಲ್ಲೆಯ ಬೆಳಪುವಿನ ಸುಮಾರು 20 ಎಕ್ರೆ ವಿಸ್ತಿರ್ಣದ ಆವರಣದಲ್ಲಿ ಒಂದು ಅತ್ಯಾಧುನಿಕ ಸಂಶೋಧನಾ ಕೇಂದ್ರವನ್ನು ಅಂದಾಜು ರೂ.141.38 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಿದ್ದು, ಇದರ ಶಿಲಾನ್ಯಾಸ ಕಾರ್ಯವನ್ನು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮೇ 4 ರಂದು ನೆರವೇರಿಸಲಿರುವರು. ಕಾರ್ಯಕ್ರಮದ ಕುರಿತು ನಡೆಯುತ್ತಿರುವ ಸಿದ್ದತೆಯನ್ನು ಶುಕ್ರವಾರ ಉನ್ನತ ಮಟ್ಟದ ಪೋಲಿಸ್ ಅಧಿಕಾರಿಗಳೊಂದಿಗೆ ಪರೀಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದು ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿರುವ ಜಿಲ್ಲೆಗಳ ಹಾಗೂ ಜಗತ್ತಿನ ಇತರ ಭಾಗಗಳಲ್ಲಿರುವ ಸಂಶೋಧನಾನಿರತರಿಗೆ ಒಂದು ಸುವರ್ಣಾವಕಾಶವನ್ನು ಕಲ್ಪಿಸಲಿದೆ. ಕರ್ಣಾಟಕ ಸರಕಾರವು ರೂಸಾದ ಅಡಿಯಲ್ಲಿ ಈಗಾಗಲೇ ರೂ.15 ಕೋಟಿಯನ್ನು ಮಂಜೂರು ಮಾಡಿದೆ. ಈ ಅತ್ಯಾಧುನಿಕ ಸಂಶೋಧನಾ ಕೇಂದ್ರವು ಜಪಾನಿನ Tsukuba ಮತ್ತು ಭಾರತದ IISER ಮಾದರಿಯಲ್ಲಿ ಸ್ಥಾಪನೆಗೊಳ್ಳಲಿದ್ದು ಮೂಲ ವಿಜ್ಞಾನದ ಸಂಶೋಧನೆಯೊಂದಿಗೆ ಹೊಸ ತಾಂತ್ರಿಕತೆಯ ಆವಿಷ್ಕಾರಗಳು ಮತ್ತು ಅವುಗಳ ಉಪಯೋಗವನ್ನು ಸಮಾಜಕ್ಕೆ ದೊರಕಿಸುವ ಉದ್ದೇಶವನ್ನು ಹೊಂದಿದೆ.

belapu_vv cenenter 02-05-2015 10-52-08 belapu_vv cenenter 02-05-2015 10-52-009 belapu_vv cenenter 02-05-2015 10-52-010 belapu_vv cenenter 02-05-2015 10-52-10 belapu_vv cenenter 02-05-2015 10-52-011 belapu_vv cenenter 02-05-2015 10-52-012 belapu_vv cenenter 02-05-2015 10-52-013

 

ಸರಕಾರಕ್ಕೆ ಸಲ್ಲಿಸಿರುವ ಕಾರ್ಯಯೋಜನೆಯು ಈ ಕೆಳಗಿನ ಮುಖ್ಯ ಸಂಶೋಧನಾ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವಿಚಾರಗಳನ್ನೊಳಗೊಂಡಿದೆ. ಅತ್ತ ಪಶ್ಚಿಮಘಟ್ಟ ಇತ್ತ ಕರಾವಳಿಯ ಮಧ್ಯೆ ಇರುವ ಭೂಪ್ರದೇಶದಲ್ಲಿ ಈ ಕೇಂದ್ರವು ಸ್ಥಾಪಿಸಲ್ಪಡುತ್ತಿರುವುದರಿಂದ ಸಹಜವಾಗಿಯೇ ಇಲ್ಲಿನ ಪರಿಸರಕ್ಕೆ ಪಥ್ಯವಾಗುವ ವಿಚಾರಗಳಲ್ಲಿ ಸಂಶೋಧನೆಯನ್ನು ಕೈಗೆತ್ತಿಕೊಳ್ಳಲಾಗುವುದು.

ಪಶ್ಚಿಮ ಘಟ್ಟದ ಪರಿಸರದಲ್ಲಿ ಅಳಿವಿನಂಚಿನಲ್ಲಿರುವ ಸಸ್ಯಗಳ ವಿಶ್ಲೇಷಣೆ ಮತ್ತು ಸಂರಕ್ಷಣೆ. ವಿವಿಧ ರೋಗರುಜಿನಗಳಿಗೆ ಸಸ್ಯಜನ್ಯ ಔಷಧಿಗಳ ಸಂಶೋಧನೆ ಮತ್ತು ಅಭಿವೃದ್ಧಿ. ದೀರ್ಘಕಾಲಿಕ ಸಾಂಕ್ರಮಿಕ ರೋಗಗಳ ನಿರ್ಮೂಲನೆಗೆ ಔಷಧ, ಔಷಧ ಪೂರಣ ಮತ್ತು ಪರಿಹಾರ ಚಿಕಿತ್ಸೆಯ ತಾಂತ್ರಿಕತೆಯ ಬಗ್ಗೆ ಸಂಶೋಧನೆ ಕೈಗೊಳ್ಳುವುದು,ಆಧುನಿಕ ವಸ್ತು ಅಥವಾ ಉಪಕರಣಗಳನ್ನು ನ್ಯಾನೋ ತಾಂತ್ರಿಕತೆಯ ಮುಖಾಂತರ ಅನ್ವೇಷಣೆ ಮಾಡುವುದು.

ಇದರ ಅಡಿಯಲ್ಲಿ ನ್ಯಾನೋ ಕಣಗಳ ಪ್ರತಿಸೂಕ್ಷ್ಮಾಣು ಕ್ರಿಯಾಶೀಲತೆ ನ್ಯಾನೋ ತಾಂತ್ರಿಕತೆಯನ್ನು ಉಪಯೋಗಿಸಿ ಔಷಧ ಪೂರಣೆ ಹಾಗೂ ಕೇಂದ್ರೀಕೃತ ಔಷಧ ಪೂರಣೆ, ಸ್ಪಿನ್ಟ್ರೋನಿಕ್ಸ್ನ್ನು ಬಳಸಿ ನ್ಯಾನೋ ಉಪಕರಣಗಳ ತಯಾರಿಕೆ. ಉಷ್ಣವಲಯದ ಪ್ರಮುಖ ಕಾಯಿಲೆಯಾದ ಮಲೇರಿಯಾಕ್ಕೆ ಪ್ರಭಾವಶಾಲಿ ಔಷಧಿಯ ಸಂಶೋಧನೆ ಮತ್ತು ನಿರ್ಲಕ್ಷಿತ ಕಾಯಿಲೆಗಳಾದ ಆಫ್ರಿಕನ್ ಟ್ರಿಪನೊಸೊಮಯಸಿಸ್, ಚಗಾಸ್, ಡೆಂಗ್ಯೂ, ಲೀಶ್ ಮಾನಿಯಸಿಸ್, ಕುಷ್ಟ, ಫೈಲೇರಿಯಾ ಮುಂತಾದವುಗಳಿಗೆ ಪರಿಣಾಮಕಾರಿಯಾದ ಔಷಧಿಗಳ ಸಂಶೋಧನೆಯನ್ನು ಕೈಗೆತ್ತಿಕೊಳ್ಳಲಾಗುವುದು.

ಮೇಲೆ ಉಲ್ಲೇಖಿಸಿದ ಸಂಶೋಧನಾ ಕಾರ್ಯಗಳು ಮಾತ್ರವಲ್ಲದೆ ಘನತ್ಯಾಜ್ಯದಿಂದ ಉಪಯುಕ್ತ ವಸ್ತುಗಳನ್ನು ತಯಾರಿಸುವ ನಿಟ್ಟಿನಲ್ಲಿ ಸಂಶೋಧನೆ ನಡೆಸುವುದು ಕೂಡಾ ಪ್ರಮುಖವಾಗಿದೆ. ಬಯೋಗ್ಯಾಸ್, ರಸಗೊಬ್ಬರವನ್ನು ಜೈವಿಕ ತ್ಯಾಜ್ಯದಿಂದಲೂ, ಆಧುನಿಕ ತಂತ್ರಜ್ಞಾನ ಡಿ-ಪೊಲಿಮರೈಸೇಶನ್ ಬಳಸಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಡೀಸೆಲ್ ತಯಾರಿ, ಫೈರೋಲಿಸಿಸ್ ತಂತ್ರಜ್ಞಾನ ಬಳಸಿ ರಸಾಯನಿಕಗಳನ್ನು ತಯಾರಿಸುವುದು ಮುಂತಾದ ಪರಿಸರ ಸ್ನೇಹಿ ಕಾರ್ಯ ಯೋಜನೆಗಳನ್ನೊಳಗೊಂಡಿದೆ.


Spread the love