ಮಂಗಳೂರು ಧರ್ಮಪ್ರಾಂತ್ಯದ ವತಿಯಿಂದ ವಿದ್ಯಾರ್ಥಿಗಳಿಗೆ ಧನ ಸಹಾಯ
ಮಂಗಳೂರು : ಮಂಗಳೂರು ಧರ್ಮಪ್ರಾಂತ್ಯದ ವತಿಯಿಂದ ಸಿ ಓ ಡಿ ಪಿ ಸಂಸ್ಥೆಯಾ ಮೂಲಕ ಬಡ ವಿದ್ಯಾರ್ಥಿಗಳಿಗೆ ಧನ ಸಹಾಯವನ್ನು ಅ ವಂ ಡಾ ಪೀಟರ್ ಪೌಲ್ ಸಲ್ಡಾನ್ಹಾ , ಧರ್ಮಧ್ಯಕ್ಷರು ಮಂಗಳೂರು ಧರ್ಮ ಪ್ರಾಂತ್ಯ ರವರು ,ಶನಿವಾರ, ಬಿಷಪ್ ಹೌಸಿನಲ್ಲಿ ವಿತರಿಸಿದರು.
 
 
 
 
 
 
 
 
 
 
 
ಶಿಕ್ಷಣ ಧನ ಸಹಾಯದ ಮೊದಲ ಭಾಗವಾಗಿ ರು 2.57 ಲಕ್ಷವನ್ನು 53 ವಿದ್ಯಾರ್ಥಿಗಳಿಗೆ ವಿತರಿಸಲಾಹಿತು.
ಬಿಷಪರು ತಮ್ಮ ಸಂದೇಶದಲ್ಲಿ, ” ಬಡವರು ನಮ್ಮ ಶಿಕ್ಷಕರಾಗಿ ದ್ದಾರೆ, ಅವರು ಸರಳವಾಗಿ ನಾವು ಹೇಗೆ ಬದುಕಬಹುದು ಎಂಬುವುದನ್ನು ಕಲಿಸುತ್ತಾರೆ. ಯೇಸು ಸ್ವಾಮಿ ನಮಗೆ , ” ಈ ಲೋಕದ ಬೆಳಕು ಮತ್ತು ಭೂಮಿಗೆ ಉಪ್ಪು ಆಗಲು ಕರೆಕೊಟ್ಟಿದ್ದಾರೆ.” ಅವರ ಹಿಂಬಾಲಕರದ ನಾವು ಪರರಿಗೆ ಉಪಕಾರ ಮಾಡಿ ಬದುಕಿದಾಗ ನಮ್ಮ ಜೀವನ ಸಾರ್ಥಕ ವಾಗುತ್ತದೆ. ಎಲ್ಲರೂ ಹಂಚಿಕೊಂಡು ಜೀವಿಸಿದಾಗ ನಾವು ಒಳ್ಳೆಯ ಮನುಷ್ಯರಾ ಗಲು ಸಾಧ್ಯ.
ವಂ ಸ್ವಾಮಿ ವಿಕ್ಟರ್ ವಿಜಯ್ ಲೋಬೊ , ಸಾರ್ವಜನಿಕ ಸಂಪರ್ಕಾಧಿಕಾರಿ, ವಂ ಸ್ವಾಮಿ ಒಸ್ವಾಲ್ಡ್ ಮೊಂತೇರೋ, ನಿರ್ದೇಶಕರು, ಸಿ ಓ ಡಿ ಪಿ ಸಂಸ್ಥೆ, ವಂ ಸ್ವಾಮಿ ರಿಚರ್ಡ್ ಡಿ ಸೋಜ , ನಿರ್ದೇಶಕರು , ಕೆನರಾ ಸಂಪರ್ಕ ಕೇಂದ್ರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲ ಭಾಗದಲ್ಲಿ , ಕ್ಯಾನ್ಸರ್ ಹಾಗೂ ಕೊರೊನ ರೋಗದ ಬಗ್ಗೆ ಮಾಹಿತಿ , ಜಾಗ್ರತಿ ನೀಡಲಾಹಿತು. ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಲಾಯಿತು.
            











