ಮಂಗಳೂರು ನೂತನ ಹಾಗೂ ನಿರ್ಗಮನ ಬಿಷಪರನ್ನು ಅಭಿನಂಧಿಸಿದ ಶಾಸಕ ವೇದವ್ಯಾಸ ಕಾಮತ್

Spread the love

ಮಂಗಳೂರು ನೂತನ ಹಾಗೂ ನಿರ್ಗಮನ ಬಿಷಪರನ್ನು ಅಭಿನಂಧಿಸಿದ ಶಾಸಕ ವೇದವ್ಯಾಸ ಕಾಮತ್

ಮಂಗಳೂರು : ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಗುರುವಾರ ಬಿಷಪ್ ಹೌಸಿಗೆ ಭೇಟಿ ನೀಡಿ ನಿರ್ಗಮನ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜಾ ಹಾಗೂ ನಿಯೋಜಿತ ಬಿಷಪ್ ವಂ ಡಾ ಪೀಟರ್ ಪಾವ್ಲ್ ಸಲ್ಡಾನಾರನ್ನು ಅಭಿನಂದಿಸಿದರು.

ಈ ವೇಳೆ ನಿರ್ಗಮನ ಬಿಷಪ್ ಅತಿ ವಂ ಡಾ ಅಲೋಶಿಯಸ್ ಪಾವ್ಲ್ ಡಿಸೋಜಾ ಅವರು ಸಪ್ಟೆಂಬರ್ 15ರಂದು ನಡೆಯಲಿರುವ ನೂತನ ಧರ್ಮಾಧ್ಯಕ್ಷರ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಶಾಸಕ ವೇದವ್ಯಾಸ ಕಾಮತ್ ಅವರಿಗೆ ಆಹ್ವಾನ ನೀಡಿದರು.

ಆಹ್ವಾನವನ್ನು ಸ್ವೀಕರಿಸಿದ ಶಾಸಕರು ತಮ್ಮ ಸಂಪೂರ್ಣ ಸಹಕಾರದ ಭರವಸೆ ನೀಡಿದರು.
ಈ ವೇಳೆ ಧರ್ಮಗುರುಗಳಾದ ವಂ ಜೆ ಬಿ ಕ್ರಾಸ್ತಾ, ವಂ ವಿಜಯ್ ವಿಕ್ಟರ್ ಲೋಬೊ, ಎಂಪಿ ನೊರೊನ್ಹಾ, ಹಾಗೂ ಇತರರು ಉಪಸ್ಥಿತರಿದ್ದರು.


Spread the love