ಮಂಗಳೂರು:  ಪ್ರಿಮಿಯಂ ಎಫ್.ಎ.ಅರ್  ನಿಧಿ ಸದ್ಬಳಕೆಗೆ  ಜೆ. ಆರ್. ಲೋಬೊ ಸೂಚನೆ

Spread the love

ಮಂಗಳೂರು: ಸುಮಾರು 85 ಕೋಟಿ ರುಪಾಯಿ ‘ಪ್ರಿಮಿಯಂ ಎಫ್.ಎ.ಅರ್’ ನಿಧಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇದ್ದು, ಈ ಮೊತ್ತವನ್ನು ನೀತಿ ನಿಯಮಾನುಸರವಾಗಿ ಆಧ್ಯತೆ ಮೇರೆಗೆ ಪ್ರಮುಖ ರಸ್ತೆಗಳ ಆಭಿವೃದ್ಧಿ ಹಾಗು ಫುಟ್‍ಪಾತ್, ಒಳಚರಂಡಿ, ನೀರುಸರಬರಾಜು ಮುಂತಾದ ವ್ಯವಸ್ಥೆಗಳನ್ನು ಕಲ್ಪಿಸಲು, ಪಾಲಿಕೆಯ ಮಹಾಪೌರರ ಆಧ್ಯಕ್ಷತೆಯಲ್ಲಿ ಆಭಿವೃದ್ಧಿ ಸಮಿತಿ ಸಭೆ ನಡೆಸಿ, ಕೂಡಲೆ ಸದನ ಸಮಿತಿಯ ಮುಂದಿಡಲು, ಶಾಸಕ ಜೆ. ಆರ್. ಲೋಬೊ ಸೂಚಿಸಿದರು.

0

ಜನಪ್ರತಿನಿಧಿಗಳು ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಆಧಿಕಾರಿಗಳೊಂದಿಗೆ ಮಂಗಳವಾರ ನಡೆದ ಈ ಸಭೆಯಲ್ಲಿ, ಕಟ್ಟಡ ನಿರ್ಮಾಣ ನೀತಿ ನಿಯಮಾವಳಿ, ಮಾರ್ಕೆಟ್ ನವೀಕರಣ, ಒಳಚರಂಡಿ ವ್ಯವಸ್ಥೆ, ಮಳೆಗಾಲಕ್ಕೆ ಮುಂಜಾಗೃತಾ ಕ್ರಮದ ಕುರಿತು ಚರ್ಚಿಸಲಾಯಿತು.

ಹೂಸ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ, ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಈ ವ್ಯವಸ್ಥೆಯನ್ನು ಸರಳೀಕರಣಗೊಳ್ಳಿಸುವ ನಿಟ್ಟಿನಲ್ಲಿ, ನಗರ ಪಾಲಿಕೆಯಲ್ಲಿ ಆಭಿವೃದ್ಧಿ ಸಮಿತಿ ಸಭೆ ನಡೆಸಿ, ಕಟ್ಟಡ ನಿರ್ಮಾಣ ನೀತಿನಿಯಮಾವಳಿಗಳನ್ನು ರೂಪಿಸಲು ಶಾಸಕರು ಸೂಚಿಸಿದರು. ಈ ಸಮಿತಿಯಲ್ಲಿ, ಮಹಾಪೌರರು, ಉಪ ಮಹಾಪೌರರ ಜೊತೆಗೆ ಪಾಲಿಕೆ, ಮುಡಾ ಮತ್ತು ವಿವಿದ ಸಂಬಂಧ ಪಟ್ಟ ಸಂಸ್ಥೆಗಳನ್ನು ಒಟ್ಟು ಸೇರಿಸಿ ಸೂಕ್ತ ನೀತಿನಿಯಮಾವಳಿಯನ್ನು ರಚಿಸುವಂತೆ ಹೇಳಿದರು.

00

ಇದರ ಜೊತೆಗೆ ಸ್ಥಿರಾಸ್ತಿ ಮೌಲ್ಯಮಾಪನ ಸಂದರ್ಭದಲ್ಲಿ ಹಲವಾರು ಸಮಸ್ಯೆಗಳಿದ್ದು, ರಸ್ತೆಗಳಿಗೆ ಹೆಸರಿಡಲು ವಿವಿಧ ಪ್ರತಿನಿಧಿಗಳೊಂದಿಗೆ ಸಭೆ ಕರೆದು ಪ್ರಥಮ ಹಂತದ ಪಟ್ಟಿ ತಯಾರಿಸುವಂತೆ ಸೂಚಿಸಿದರು.

ಈ ಸಭೆಯಲ್ಲಿ, ಮೇಯರ್ ಜೆಸಿಂತಾ ಆಲ್ಫ್ರೇಡ್, ಉಪಮೇಯರ್ ಪುರುಷೋತ್ತಮ್  ಚಿತ್ರಾಪುರ, ಮಾಜಿ ಮೇಯರ್ ಮಹಾಬಲ ಮಾರ್ಲ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ದೀಪಕ್ ಕುಮಾರ್, ಹರಿನಾಥ್, ಪ್ರಕಾಶ್ ಸಾಲಿಯನ್, ಕೇಶವ್ ಮರೊಳಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love