ಮಂಗಳೂರು : ಬಿಜೈಯಲ್ಲಿ ‘ದಿ ಓಶಿಯನ್ ಪರ್ಲ್ ಇನ್’ ಉದ್ಘಾಟನೆ

ಮಂಗಳೂರು : ಬಿಜೈಯಲ್ಲಿ ‘ದಿ ಓಶಿಯನ್ ಪರ್ಲ್ ಇನ್’ ಉದ್ಘಾಟನೆ

ಮಂಗಳೂರು : ಸಾಗರ ರತ್ನಹೊಟೇಲ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಗರದ ಬಿಜೈ ಕಾಪಿಕಾಡ್ ರಸ್ತೆಯ ಬಳಿ ನಿರ್ಮಾಣಗೊಂಡ ನೂತನ ಕಟ್ಟಡದಲ್ಲಿ ‘ದಿ ಓಶಿಯನ್ ಪರ್ಲ್ ಇನ್’ ಉದ್ಘಾಟನಾ ಕಾರ್ಯಕ್ರಮ ಬುಧವಾರ ನಡೆಯಿತು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ವಾಸುದೇವ ಅಸ್ರಣ್ಣ, ಶರವು ಮಹಾಗಣಪತಿ ದೇವಸ್ಥಾನದ ಅರ್ಚಕರಾದ ಶ್ರೀ ರಾಘವೇಂದ್ರ ಶಾಸ್ತ್ರೀ, ಝಿನತ್ ಭಕ್ಷ ಬಂದರ್ ಮಸೀದಿಯ ಖತೀಬ್ ಸದಕತುಲ್ಲಾ ಫೈಝಿ, ಚರ್ಚ್ ಆಫ್ ಸೌತ್ ಇಂಡಿಯಾದ ಬಿಷಪ್ ಅತೀ. ವಂ. ಜೆ.ಎಸ್. ಸದಾನಂದ, ಲೂರ್ಡ್ಸ್ ವಿದ್ಯಾಸಂಸ್ಥೆಗಳ ಪ್ರಾಂಶುಪಾಲ ಹಾಗೂ ಧರ್ಮಗುರುಗಳಾದ ವಂ. ರಾಬರ್ಟ್‌ ಡಿಸೋಜ, ಸಾಗರತ್ನ ಹೊಟೇಲ್ ಲಿ. ಉಪಾಧ್ಯಕ್ಷ ಬಿ.ಎನ್.ಗಿರೀಶ್, ನಿರ್ದೇಶಕ ದಿನೇಶ್ ಬನಾನ, ಸಿಜಿಎಂ ಶಿವಕುಮಾರ್, ಜಿ.ಎಂ. ಮಿಲನ್ ಸ್ಯಾಮುವೆಲ್, ಪ್ರಮೋಟರ್ ಪ್ರಸನ್ನ ಕೆ.ಆರ್ ಮೊದಲಾದವರು ಉಪಸ್ಥಿತರಿದ್ದರು.