ಮಂಗಳೂರು: ಭಿನ್ನ ಕೋಮಿನ ಪ್ರೇಮಿಗಳು ರೈಲಿನಡಿ ಬಿದ್ದು ಆತ್ಮಹತ್ಯೆ

Spread the love

ಮಂಗಳೂರು: ಮದುವೆಗೆ ಮನೆಯವರ ವಿರೋಧವಿದ್ದ ಕಾರಣ ಯುವ ಜೋಡಿಯೊಂದು ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಗರದ ಹೊರವಲಯದ ಅಡ್ಯಾರ್ ಪದವಿನಲ್ಲಿ ಜರುಗಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಸ್ಥಳೀಯ ಅಡ್ಯಾರ್ ಪದವು ನಿವಾಸಿಗಳಾದ ಕ್ಲಾಡ್ (35) ಹಾಗೂ ಜಯಂತಿ (30) ಎಂದು ಗುರುತಿಸಲಾಗಿದೆ.
ಕ್ಲಾಡ್ ನೀರುಮಾರ್ಗದ ಪೋಸ್ಟ್ ಮ್ಯಾನ್ ಆಗಿ ದುಡಿಯುತ್ತಿದ್ದರೆ, ಜಯಂತಿ ಇದೇ ಪರಿಸರದ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಸೇಲ್ಸ್ ಗರ್ಲ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇಬ್ಬರು ಭಿನ್ನಕೊಮಿನವರಾಗಿದ್ದು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇವರ ಮದುವೆ ಎರಡು ಕುಟುಂಬಗಳಿಂದ ವಿರೋಧವಿತ್ತು ಎನ್ನಲಾಗಿದ್ದು, ಇದರಿಂದ ಬೇಸರಗೊಂಡ ಇವರು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ.
ಘಟನೆಯ ಕುರಿತು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Spread the love
1 Comment
Inline Feedbacks
View all comments
Original R.Pai
8 years ago

Very sad indeed. No point in ending your life. I wish we had a better system in place to educate people the importance of life and how love, hate, jealousy and other human emotions are all temporary. They are like tides – they come and go. This would save thousands of lives in our society where silly Bollywood movies teach very delusional lessons to our youth!!