ಮಂಗಳೂರು: ರಸ್ತೆ ಅಫಘಾತದಲ್ಲಿ ವಿದ್ಯಾರ್ಥೀಯ ಸಾವು

Spread the love

ಮಂಗಳೂರು: ರಸ್ತೆ ಅಫಘಾತದಲ್ಲಿ 16 ವರ್ಷ ಪ್ರಾಯದ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ದೇರಳಕಟ್ಟೆ ಜಂಕ್ಷನ್ ಬಳಿ ಗುರುವಾರ ಜರುಗಿದೆ.
ಮೃತ ವಿದ್ಯಾರ್ಥಿಯನ್ನು ಕಲ್ಲಕಟ್ಟ ನಿವಾಸಿ ಮಹಮ್ಮದ್ ಶಫೀಕ್ (16) ಎಂದು ಗುರುತಿಸಲಾಗಿದೆ.
ಗುರುವಾರ ಬೆಳಿಗ್ಗೆ ಮಹಮ್ಮದ್ ಶಫೀಕ್ ತನ್ನ ನೆರೆಮನೆಯ ಅಬ್ದುಲ್ ರಜಾಕ್ ಎಂಬವರ ಜೊತೆ ಹೋಂಡಾ ಆಕ್ಟಿವಾ ಸ್ಕೂಟರ್ ನಲ್ಲಿ ದೇರಳಕಟ್ಟೆ ಕಡೆ ತೆರಳುತ್ತಿದ್ದ ವೇಳೆ ಜಂಕ್ಷನ್ ಬಳಿ ತಮ್ಮ ಪರಿಚಯಸ್ಥರನ್ನು ನೋಡಿ ವಾಹನ ನಿಲ್ಲಿಸಿದ ವೇಳೆ ಅತಿ ವೇಗದಿಂದ ಕಾರೊಂದು ಹಿಂದಿನಿಂದ ಸ್ಕೂಟರಿಗೆ ಡಿಕ್ಕಿ ಹೊಡೆಯಿತು. ಗಂಭೀರ ಗಾಯಗೊಂಡ ಶಫೀಕ್ ಸ್ಥಳದಲ್ಲೇ ಮೃತಪಟ್ಟರು. ಮೃತ ಶಫೀಕ್ ಕಲ್ಲಕಟ್ಟ ಸರಕಾರಿ ಶಾಲೆಯ ವಿದ್ಯಾರ್ಥಿಯಾಗಿದ್ದು ಮೊನ್ನೆಯಷ್ಟೇ ಹತ್ತನೇ ತರಗತಿ ಉತ್ತೀರ್ಣರಾಗಿ ಪಿಯುಸಿ ಸೇರುವ ಆಶೆಯಲ್ಲಿದ್ದರು.
ಕೊಣಾಜೆ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.


Spread the love