ಮಂಗಳೂರು| ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಖಂಡಿಸಿ ಬಸ್ಗೆ ಕಲ್ಲು ತೂರಾಟ: ನಾಲ್ವರ ಬಂಧನ
ಮಂಗಳೂರು: ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಕೃತ್ಯ ಖಂಡಿಸಿ ವಿಶ್ವಹಿಂದೂ ಪರಿಷತ್ ನೀಡಿದ್ದ ದ.ಕ. ಜಿಲ್ಲಾ ಬಂದ್ ಸಂದರ್ಭ ನಗರದ ಪಂಪ್ವೆಲ್ ಬಳಿ ಬಸ್ಗೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ನಾಲ್ಕು ಮಂದಿಯನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಕೃತ್ಯಕ್ಕೆ ಬಳಸಲಾದ ಎರಡು ಸ್ಕೂಟರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರದ ಅತ್ತಾವರ ನಿವಾಸಿಗಳಾದ ಬಾಲಚಂದ್ರ (31), ಅಕ್ಷಯ್ (21), ಜಪ್ಪಿನಮೊಗರು ನಿವಾಸಿ ಶಬೀನ್ ಪಡಿಕ್ಕಲ್ (38), ಮಂಜನಾಡಿ ನಿವಾಸಿ ರಾಕೇಶ್ ಎಂ.(26) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 2ರಂದು ಬೆಳಗ್ಗೆ 6:50ರಿಂದ ಬೆಳಿಗ್ಗೆ 7ರ ಮಧ್ಯೆ ಪಂಪ್ವೆಲ್ ಬಳಿ 5 ಕೆಎಸ್ಆರ್ಟಿಸಿ ಬಸ್ಗಳ ಮೇಲೆ ಕಲ್ಲು ಎಸೆದು ಪರಾರಿಯಾಗಿದ್ದರು. ಇದರಿಂದ ಬಸ್ಗಳ ಮುಂಭಾಗ ಹಾನಿಯಾಗಿತ್ತು. ಬಸ್ನ ಚಾಲಕ ಸತೀಶ್ ನಾಯಕ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದರು