ಮಂಗಳೂರು: ‘ವಾರಿಯರ್ ಆಫ್ ದಿ ಡೇ’ ಆಗಿ ರಂಜನ್ ಕುಮಾರ್ ಆಯ್ಕೆ

Spread the love

ಮಂಗಳೂರು: ‘ವಾರಿಯರ್ ಆಫ್ ದಿ ಡೇ’ ಆಗಿ ರಂಜನ್ ಕುಮಾರ್ ಆಯ್ಕೆ

ಮಂಗಳೂರು: ಕೊರೋನ ಹಿನ್ನೆಲೆಯಲ್ಲಿ ನಗರದಲ್ಲಿ ಲಾಕ್ಡೌನ್ ಜಾರಿಯಲ್ಲಿರುವ ಸಂದರ್ಭ ಉತ್ತಮ ಕಾರ್ಯನಿರ್ವಹಿಸಿದ ಓರ್ವ ಪೊಲೀಸ್ ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತರು ‘ದಿನದ ಕೊವಿಡ್ ವಾರಿಯರ್’ ಎಂದು ಗೌರವಿಸಲಿದ್ದಾರೆ.

ಅದರಂತೆ  ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಎ.ಎಸ್.ಐ. ರಂಜನ್ ಕುಮಾರ್ ಅವರನ್ನು ‘ವಾರಿಯರ್ ಆಫ್ ದಿ ಡೇ’ ಎಂದು ಗುರುತಿಸಲಾಗಿದೆ.

ರಂಜನ್ ಕುಮಾರ್ ಎ.ಎಸ್.ಐ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆರವರು ಕರೋನಾ ವೈರಸ್(ಕೋವಿಡ್-19) ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿದೇಶಗಳಿಂದ ಬಂದಿರುವವರನ್ನು ವಿಶೇಷ ನಿಗಾವಹಿಸಿ ಹೋಮ್ ಕ್ವಾರಂಟೈನ್ ಮಾಡುವ ಪ್ರಮುಖ ಜವಬ್ದಾರಿಯನ್ನು ವಹಿಸಿಕೊಂಡಿರುತ್ತಾರೆ.

ಆಶಾ ಕಾರ್ಯಕರ್ತರೊಂದಿಗೆ ಉತ್ತಮವಾದ ಸಂವಾಹನವನ್ನು ಸಾಧಿಸಿ ಹೋಮ್ ಕ್ವಾರಂಟೈನ್ ಆಗಿರುವವರನ್ನು ಮನೆಯಿಂದ ಹೊರ ಬಾರದಂತೆ ಸೂಚನೆಗಳನ್ನು ನೀಡಿ, ಅವರಿಗೆ ದೈನಂದಿನ ಅಗತ್ಯ ಸಾಮಗ್ರಿಗಳು ತಲುಪಿಸುವಲ್ಲಿ ಉತ್ತಮ ಕಾರ್ಯನಿವರ್ಹಿಸಿ ಹೋಮ್ ಕ್ವಾರಂಟೈನ್ನಲ್ಲಿರುವ ವ್ಯಕ್ತಿಗಳಿಂದ ಪ್ರಶಂಸೆಗೆ ಪಾತ್ರರಾಗಿರುತ್ತಾರೆ.


Spread the love