ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೊಂಕಣಿ ಎಂ.ಎ. – ಸುವರ್ಣಾವಕಾಶ

Spread the love

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೊಂಕಣಿ ಎಂ.ಎ. – ಸುವರ್ಣಾವಕಾಶ

ಮಂಗಳೂರು : 2016-17 ನೇ ಶೈಕ್ಷಣಿಕ ವರ್ಷದಿಂದ ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟೆ, ಮಂಗಳೂರು ಇಲ್ಲಿನ ಸಂಧ್ಯಾ ಕಾಲೇಜಿನಲ್ಲಿ ಕೊಂಕಣಿ ಕಲಿಕೆ ಆರಂಭವಾಗಲಿದೆ. ಯುವಜನತೆ, ಮನೆವಾರ್ತೆಯ ಗೃಹಿಣಿಯರು, ಕೊಂಕಣಿಯಲ್ಲಿ ಉನ್ನತ ಶಿಕ್ಷಣ ಪಡೆಯಲು ಇಚ್ಛಿಸುವವರು ಇದರ ಸದುಪಯೋಗ ಪಡೆಯಲು ವಿನಂತಿಸಲಾಗಿದೆ. ಇದು ಹೊಸ ಕೋರ್ಸ್ ಆದುದರಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದವರಿಗೆ, ಕೊಂಕಣಿ ಬಗ್ಗೆ ಆಸಕ್ತಿ ಇರುವವರಿಗೆ ಅವಕಾಶ ಇದೆ.

ಕೆಲವೇ ಸೀಟುಗಳು ಲಭ್ಯವಿದ್ದು, ಕೊಂಕಣಿ ಎಂ.ಎ. ಕಲಿಯಲು ಮುಂದೆ ಬರುವವರಿಗಾಗಿ ಕೊಂಕಣಿ ಅಕಾಡೆಮಿ, ವಿಶ್ವ ಕೊಂಕಣಿ ಕೇಂದ್ರ, ಮಾಂಡ್ ಸೊಭಾಣ್, ಕೊಂಕಣಿ ಪ್ರಚಾರ ಸಂಚಾಲನ ಮತ್ತಿತರ ಕೊಂಕಣಿ ಸಂಸ್ಥೆಗಳಿಂದ ವಿದ್ಯಾರ್ಥಿ ವೇತನ ನೀಡಲಾಗುವುದು.

ಆಸಕ್ತರು ಕೂಡಲೇ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಕಛೇರಿಯನ್ನು ಸಂಪರ್ಕಿಸಿ.
ಫೊನ್ 0824-2424608, ಮೊ: 9449284031 (ಡಾ ಜಯವಂತ ನಾಯಕ್), 9845209374 (ವಿಕ್ಟರ್ ಮತಾಯಸ್) email:uecm2015@gmail.com


Spread the love