ಮಂಗಳೂರು: ಸೆಲೂನ್ ಮಾಲಕನಿಗೆ ಚೂರಿ ಇರಿತ ಪ್ರಕರಣ; ಆರೋಪಿಯ ಬಂಧನ

Spread the love

ಮಂಗಳೂರು: ಸೆಲೂನ್ ಮಾಲಕನಿಗೆ ಚೂರಿ ಇರಿತ ಪ್ರಕರಣ; ಆರೋಪಿಯ ಬಂಧನ

ಮಂಗಳೂರು: ಸೆಲೂನ್ ಮಾಲಕನಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ ಆರೋಪಿ ಬಂಟ್ವಾಳ ತಾಲೂಕಿನ ಬರೀಮಾರದ ಆನಂದ ಸಪಲ್ಯ (49) ನನ್ನು ಪೊಲೀಸರು ಬಂಧಿಸಿದ್ದಾರೆ.

ರಾಜಕೀಯ ವಿಚಾರವಾಗಿ ನಡೆದ ಚರ್ಚೆ ವಿಕೋಪಕ್ಕೆ ತಿರುಗಿ ಬೋಳಾರದ ಕಾಂತಿ ಹೇರ್ ಡ್ರೆಸ್ಸಸ್ ನ ಮಾಲಕ ಎಡ್ವಿನ್ ವಿನಯ್ ಕುಮಾರ್ (65) ಅವರಿಗೆ ಚೂರಿಯಿಂದ ಇರಿದ ಘಟನೆ ನಗರದ ಬೋಳಾರದ ಸರಕಾರಿ ಶಾಲೆಯ ಬಳಿ ಶನಿವಾರ ಸಂಜೆ ನಡೆದಿತ್ತು.

ಮದ್ಯ ಸೇವಿಸಿದ ಅಮಲಿನಲ್ಲಿದ್ದ ಆರೋಪಿ ಆನಂದ ಸಫಲ್ಯ ಸಮೀಪದಲ್ಲೇ ಇರುವ ತನ್ನ ಮನೆಯಿಂದ ಚೂರಿ ತಂದು ಎಡ್ವಿನ್‌ ಅವರ ಎದೆಗೆ ಇರಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


Spread the love