ಮಂಗಳೂರು: 19, 20ರಂದು ಅಡ್ಯಾರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತರಾಷ್ಟ್ರೀಯ ವಿಚಾರ ಸಂಕಿರಣ

Spread the love

ಮಂಗಳೂರು: ಸ್ಮಾರ್ಟ್ ಮೆಟೀರಿಯಲ್ಸ್ ಮತ್ತು ಎಲೆಕ್ಟ್ರಾನಿಕ್ಸ್‍ನಲ್ಲಿ ಬದಲಾಗುತ್ತಿರುವ ತಂತ್ರಜ್ಞಾನ ಕುರಿತು ಅಂತರಾಷ್ಟ್ರೀಯ ವಿಚಾರ ಸಂಕಿರಣ ಇದೇ 19, 20ರಂದು ಅಡ್ಯಾರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ.

ಸಹ್ಯಾದ್ರಿ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರ್, ಸಂವಹನ ಎಂಜಿನಿಯರಿಂಗ್ ವಿಭಾಗ ಹಾಗೂ ನ್ಯಾನೋ ಸೈನ್ಸ್ ಮತ್ತು ತಂತ್ರಜ್ಞಾನ ಉತ್ಕøಷ್ಟ ಕೇಂದ್ರದ (ಸೆಂಟ್) ಸಹಯೋಗದಲ್ಲಿ ನಡೆಯುಲಿದೆ. ಈ ಕಾರ್ಯಕ್ರಮವನ್ನು ಡಾ. ಎಂ.ಜಿ.ಆರ್. ಶೈಕ್ಷಣಿಕ ಮತ್ತು ಸಂಶೋಧನಾ ಕೇಂದ್ರದ ಸಹ ಕುಲಪತಿ ಪದ್ಮಶ್ರೀ ಆರ್. ಎಂ. ವಸಗಂ ಫೆ.19ರಂದು ಬೆಳಿಗ್ಗೆ 9.30ಕ್ಕೆ ಉದ್ಘಾಟಿಸಿ, ಪ್ರಧಾನ ಭಾಷಣ ಮಾಡುವರು. ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ. ಭೈರಪ್ಪ ಹಾಗೂ ಜರ್ಮನಿಯ ಡೋಹ್ಲರ್ ಮ್ಯಾಕ್ಸ್ ಪ್ಲಾಂಕ್ ಸಂಸ್ಥೆಯ ಪ್ರೊ. ಗೋಟಿಫೈಡ್ ಡೊಹ್ಲೆಲ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಹ್ಯಾದ್ರಿ ಶಿಕ್ಷಣ ಸಮೂಹದ ಸಂಸ್ಥೆಯ ಅಧ್ಯಕ್ಷ ಡಾ. ಮಂಜುನಾಥ ಭಂಡಾರಿ, ನ್ಯಾನೋ ಸೈನ್ಸ್ ಮತ್ತುಉತೃಷ್ಟ ಕೇಂದ್ರದ ನಿರ್ದೇಶಕ ಡಾ. ರಿಚರ್ಡ್ ಪಿಂಟೊ, ಕಾಲೇಜಿನ ಪ್ರಾಂಶುಪಾಲ ಡಾ. ಯು. ಎಂ. ಭೂಷಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

2-20160217-pressmeet-001

19 ಹಾಗೂ 20ರಂದು ಎರಡು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ವೈಜ್ಞಾನಿಕ ಹಾಗೂ ತಾಂತ್ರಿಕ ವಿಷಯಗಳ ಚರ್ಚೆ ನಡೆಯಲಿದೆ. ಮುಂಬೈನ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯ (ಟಿಐಎಫ್‍ಆರ್) 18 ಪ್ರಸಿದ್ಧ ವಿಜ್ಞಾನಿಗಳು ಉಪನ್ಯಾಸ ನೀಡಲಿದ್ದು, ಬಾಂಬೆ ಐಐಟಿಯ 50ಕ್ಕೂ ಹೆಚ್ಚು ಸಂಶೋಧಕರು ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸುವರು.

ನವೀನ ಮಾದರಿಯ ಸಲಕರಣೆಗಳು ಮತ್ತು ತಂತ್ರಜ್ಞಾನಗಳಿಂದ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳನ್ನು ಈ ಸಮ್ಮೇಳನದಲ್ಲಿ ವಿಮರ್ಶಿಸಲಾಗುವುದು. ಅಯೊ ವಿದ್ಯುತ್ ಕ್ಷೇತ್ರದಲ್ಲಿ ವೈವಿಧ್ಯ ಸಲಕರಣೆಗಳ ಮಹತ್ವ, ಮಲ್ಟಿ ಫೆರೋಯಿಕ್ಸ್, ಪಾಲಿಮರ್ಸ್, ನ್ಯಾನೊ ಮೆಟಿರೀಯಲ್, ಆಗ್ರ್ಯಾನಿಕ್ ಮೆಟಿರೀಯಲ್, ಮತ್ತು ಫೋಟೊನಿಕ್ ಸಲಕರಣೆಗಳ ವ್ಯಾಪ್ತಿ, ಆಗ್ರ್ಯಾನಿಕ್ ಸೋಲಾರ್ ಸೆಲ್ಸ್‍ಗಳು ಸೇರಿದಂತೆ. ಸಿ.ಡಬ್ಲ್ಯು ಟೆರಾಹರ್ಟ್ಜ್ ಫೋಟೊನಿಕ್ಸ್ ಮತ್ತು ನವೀನ ತಂತ್ರಜ್ಞಾನದ ವ್ಯಾಪ್ತಿ ಕುರಿತು ಚರ್ಚೆಗಳು ನಡೆಯಲಿವೆ. ಸಮ್ಮೇಳನದಲ್ಲಿ ವಿಷಯ ಕುರಿತು ಆಹ್ವಾನಿತರಿಂದ ಚರ್ಚೆ, ಪ್ರಾತ್ಯಕ್ಷಿಕೆ ನಡೆಯಲಿವೆ. ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲು ಈ ಸಮ್ಮೇಳನ ವೇದಿಕೆ ಕಲ್ಪಿಸಲಿದೆ. ನ್ಯಾನೋ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತ ಈ ಸಮ್ಮೇಳನ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ತಮ್ಮ ಅಭಿಪ್ರಾಯ ಮಂಡಿಸಲು ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು ವೇದಿಕೆ ಕಲ್ಪಿಸಿದೆ.

ಮುಂಬೈನ ಐಐಟಿಬಿ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ವಿಭಾಗದ ಪ್ರೊ. ಸಿದ್ಧಾರ್ಥ ಪಿ. ದತ್ತ ಗುಪ್ತ, ಪ್ರೊ. ಕೆ. ಎಲ್. ನರಸಿಂಹನ್, ಭೌತಶಾಸ್ತ್ರ ವಿಭಾಗದ ಪ್ರೊ. ದಿನೇಶ್ ಕಬ್ರ, ಡಾ. ಸಿಜಿ ಮಥೈ, ಮಂಗಳೂರು ವಿಶ್ವವಿದ್ಯಾಲಯದ ಪ್ರೊ. ಮಂಜುನಾಥ ಪಟ್ಟಾಭಿ, ಸಹ್ಯಾದ್ರಿ ಕಾಲೇಜಿನ ಡಾ. ರತೀಶ್‍ಚಂದ್ರ ಆರ್. ಗಟ್ಟಿ, ಗುಲ್ಬರ್ಗ ಶರಣ ಬಸವೇಶ್ವರ ವಿಜ್ಞಾನ ಕಾಲೇಜಿನ ಡಾ. ಎಂ. ಎಸ್. ಜೋಗದ್, ಸಿಲಿಕಾನ್ ಸೋಲಾರ್ ಸೆಲ್ ಗ್ರೂಪ್‍ನ ಡಾ. ವಂದನಾ, ಮುಂಬೈನ ಟಿಐಎಫ್‍ಆರ್ ಸಿಎಂಪಿ ಮತ್ತು ಎಂ. ಎಸ್. ವಿಭಾಗದ ಶ್ರೀಗಣೇಶ್ ಪ್ರಭು, ಪ್ರೊ. ಅಚಂತ ವೇಣುಗೋಪಾಲ್, ಜರ್ಮನಿಯ ಮ್ಯಾಕ್ಸ್ ಪ್ಲ್ಯಾಂಕ್ ಇನ್‍ಸ್ಟಿಟ್ಯೂಟ್ ಫಾರ್ ದಿ ಸೈನ್ಸ್ ಆಫ್ ಲೈಟ್‍ನ ಡಾ. ಫ್ಲೊರಿಯನ್ ಸೆಡ್ಲಿಮೀಯರ್, ಮಂಗಳೂರು ವಿಶ್ವವಿದ್ಯಾಲಯದ ಡಾ. ಕೆ. ಗೋಪಾಲಕೃಷ್ಣ ನಾಯಕ್, ಟಿಐಎಫ್‍ಆರ್ ಮುಂಬೈ, ಕೇರಳದ ಕನ್ಹಗಡ್‍ನ ಡಾ. ರಾಜೇಶ್ ರೈ ಪಿ, ಸಹ್ಯಾದ್ರಿ ಕಾಲೇಜಿನ ಡಾ. ನವೀನ್ ಎನ್. ಬಪ್ಪಳಿಗೆ, ಸುಳ್ಯದ ಕೆವಿಜಿ ಎಂಜಿನಿಯರಿಂಗ್ ಕಾಲೇಜಿನ ಉಪ ಪ್ರಾಂಶುಪಾಲರು ಡಾ. ಶಿವಕುಮಾರ್ ಮುಂತಾದವರು ಮಾತನಾಡುವರು.

ಈ ಅಂತರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಸರ್ಕಾರ ಸೇರಿದಂತೆ ಹಲವು ಖಾಸಗಿ ಕಂಪೆನಿಗಳು ಬೆಂಬಲ ಸೂಚಿಸಿವೆ. ಅವುಗಳಲ್ಲಿ ಎಪ್ಸಿಲಾನ್ ಕಾರ್ಬನ್ ಪ್ರೈವೇಟ್ ಲಿಮಿಟೆಡ್, ಹೈದ್ರಾಬಾದ್‍ನ ಇಂಟಿಗ್ರೇಟೆಡ್ ಕ್ಲೀನ್ ರೂಂ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಮುಂಬೈನ ಲೇಸರ್ ಸೈನ್ಸ್‍ನ ಸರ್ವೀಸಸ್‍ನ (1), ಮುಂಬೈನ ಸ್ಪೆಷಲೈಸ್ ಇನ್‍ಸ್ಟ್ರುಮೆಂಟ್ ಮಾರ್ಕೆಂಟಿಂಗ್ ಕಂಪೆನಿ, ಬೆಂಗಳೂರು ಐವೇವ್ ಸಿಸ್ಟಮ್ಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಪುಣೆಯ ಓಂ ಸೈಂಟಿಫಿಕ್ ಪ್ರೈವೇಟ್ ಲಿಮಿಟೆಡ್ ಹಾಗೂ ಮಂಗಳೂರಿನ ಕೆನರಾ ಬ್ಯಾಂಕ್ ಸಹಕಾರ ನೀಡಿವೆ.


Spread the love