ಮಂಗಳೂರು : 20ನೇ ಭಾನುವಾರದ ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಅಭಿಯಾನ

Spread the love

ಮಂಗಳೂರು : ರಾಮಕೃಷ್ಣ ಮಿಷನ್ ಆಯೋಜಿಸುತ್ತಿರುವ 40 ವಾರಗಳ “ಸ್ವಚ್ಛ ಮಂಗಳೂರು” ಅಭಿಯಾನ 20ನೇ ಭಾನುವಾರದ ಸ್ವಚ್ಚತಾ ಕಾರ್ಯವನ್ನು ದಿನಾಂಕ 14-06-2015 ರಂದು ನಗರದ ಮಂಗಳಾದೇವಿ ದೇವಸ್ಥಾನ ಹಾಗೂ ದೇವಸ್ಥಾನದರ ಥಬೀದಿಯಲ್ಲಿ ಕೈಗೊಳ್ಳಲಾಯಿತು. ಸ್ವಾಮಿ ಜಿತಕಾಮಾನಂದಜಿ ಹಾಗೂ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉಪಸ್ಥಿತಿಯಲ್ಲಿ ಮಂಗಳಾದೇವಿ ದೇವಸ್ಥಾನದ ಮೊಕ್ತೇಸರ ಶ್ರೀ ರಮಾನಾಥ ಹೆಗ್ಡೆ ಹಾಗೂ ಶ್ರೀರಾಮ ಟ್ರಾನಪೆÇೀರ್ಟ್ ಫೈನಾನ್ಸ್ ಕಂಪೆನಿಯ ಅಧಿಕಾರಿ ಶ್ರೀ ಶರತ್‍ಚಂದ್ರ ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು.

swachh-mangaluru-14062015 (21)

ಅನೇಕ ದಿನಗಳಿಂದ ದೇವಸ್ಥಾನದ ಮೂಲೆಯೊಂದರಲ್ಲಿ ಸಂಗ್ರಹವಾಗಿದ್ದ ಕಸದ ರಾಶಿಯನ್ನು ಯುವಾ ಬ್ರಿಗೇಡ್ ಸದಸ್ಯರು ತೆರವುಗೊಳಿದ್ದು ಅವರಲ್ಲಿಯೇ ಸಾರ್ಥಕ್ಯ ಭಾವ ಮೂಡಿಸಿತ್ತು. ಕಾರ್ಯಕರ್ತರ ಒಂದು ತಂಡ ರಸ್ತೆ ಬದಿ ಹರಡಿಕೊಂಡಿದ್ದ ತ್ಯಾಜ್ಯವನ್ನು ತೆಗೆದು ಶುಚಿಗೊಳಿಸಿದ್ದಾರೆ. ಹಾಗೇ ಕಳೆ ಕೊಚ್ಚುವ ಯಂತ್ರವನ್ನು ಬಳಸಿ ಇಡೀ ರಥಬೀದಿ ಪರಿಸರವನ್ನು ಸ್ವಚ್ಛಗೊಳಿಸಲಾಗಿದೆ. ಅಲ್ಲದೇ ಮಂಗಳಾದೇವಿ ಬಸ್ ನಿಲ್ದಾಣ ಹಾಗು ಅದರ ಹಿಂಭಾಗದ ತೋಡುಗಳನ್ನು ಶುಚಿಗೊಳಿಸಲಾಗಿದೆ.
ನಿರುಪಯುಕ್ತಕಾಲುದಾರಿ: ಇಡೀ ಮಂಗಳಾದೇವಿ ರಥಬೀದಿಯಲ್ಲಿ ಉತ್ತಮ ಮಟ್ಟದ ಕಾಲುದಾರಿ ನಿರ್ಮಿಸಿದ್ದಾರೆ. ಆದರೆ ಅಲ್ಲಲ್ಲಿ ಬೃಹತ್ ಮರದ ದಿಮ್ಮಿಗಳು, ಸ್ಲಾಬ್ ಗಳು ಕಾಲುದಾರಿಯನ್ನು ಆಕ್ರಮಿಸಿಕೊಂಡಿದ್ದವು. ಸ್ವಚ್ಛ ಮಂಗಳೂರು ಕಾರ್ಯಕರ್ತರು ಅವನ್ನೆಲ್ಲ ಜೆಸಿಬಿ ಸಹಾಯದಿಂದ ತೆರವುಗೊಳಿಸಿ ಶುಚಿಗೊಳಿಸಿದರು.
ಐದು ಮಾರ್ಗಸೂಚಿ ಫಲಕಗಳ ನವೀಕರಣ– ಹಲವಾರು ವರುಷಗಳಿಂದ ನಿರ್ಲಕ್ಷಕ್ಕೊಳಗಾದ ಹಲವಾರು ಮಾರ್ಗಸೂಚಿ ಫಲಕಗಳು ನಗರದಲ್ಲಿ ಅಲ್ಲಲ್ಲಿ ಕಾಣಸಿಗುವುದು ಸಾಮಾನ್ಯ. ಸ್ವಚ್ಚ ಮಂಗಳೂರು ಅಭಿಯಾನದಲ್ಲಿ ಈ ಫಲಕಗಳನ್ನು ನವೀಕರಿಸುವ ಕಾರ್ಯ ನಡೆಯುತ್ತಿದೆ. ಅದರಂತೆ ಇಂದು ಐದು ಬೋರ್ಡಗಳನ್ನು ಹೊಸದಾಗಿ ಬರೆಸಲಾಗಿದೆ. ಇಂದು ನವೀಕರಣಗೊಂಡ ಫಲಕಗಳು : 1) ಮಂಗಳಾದೇವಿ ದೇವಸ್ಥಾನದ ಎದುರುಗಡೆ 2) ಕಾಪೆರ್Çೀರೇಶನ್ ಬ್ಯಾಂಕ್ ಮುಖ್ಯ ಕಚೇರಿಯ ಎದುರುಗಡೆ 3) ಅಮರ ಆಳ್ವ ರಸ್ತೆಯಲ್ಲಿ 4) ಮಂಗಳಾ ನಗರದಲ್ಲಿ 5) ಮಂಗಳಾದೇವಿ ರಸ್ತೆಯಲ್ಲಿ.
ಜಾಗೃತಿ ಕಾರ್ಯ : ಸ್ವಯಂ ಸೇವಕರು ಮಂಗಳಾದೇವಿ ಪರಿಸರ, ಮಂಗಳಾ ನಗರ, ಜೆಪ್ಪುಮಾರ್ಕೆಟ್ ಮುಂತಾದ ಕಡೆ ಮನೆಮನೆಗೆ ತೆರಳಿ ಸ್ವಚ್ಚ ಪರಿಸರ ಕುರಿತ ಕರಪತ್ರ ಹಂಚಿದರು.


Spread the love