ಮಟ್ಕಾ ಆಡುತ್ತಿದ್ದ ನಾಲ್ವರ ಬಂಧನ – ರೂ 1.28 ಲಕ್ಷ ಮೌಲ್ಯದ ಸೊತ್ತು ವಶ

ಮಟ್ಕಾ ಆಡುತ್ತಿದ್ದ ನಾಲ್ವರ ಬಂಧನ – ರೂ 1.28 ಲಕ್ಷ ಮೌಲ್ಯದ ಸೊತ್ತು ವಶ

ಮಂಗಳೂರು: ನಗರದ ಪಂಜಿಮೊಗರು ಸಮೀಪ ಮಟ್ಕಾ ಜೂಜಾಟ ಆಡುತ್ತಿದ್ದ ನಾಲ್ವರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಸೋಮೇಶ್ವರ ಕುಂಪಳ ನಿವಾಸಿ ಗೌತಮ(29), ಕೋಟೆಕಾರು ಕುಂಪಳದ ರಘುಚಂದ್ರ (29), ಪಂಜಿಮೊಗರು ನಿವಾಸಿ ರವಿ ಅರುಣಾಚಲಂ (52), ಬಿಜೈ ಕಾಪಿಕಾಡ್ ನಿವಾಸಿ ರಕ್ಷಿತ್ ಜೆ ರಾವ್ (30) ಎಂದು ಗುರುತಿಸಲಾಗಿದೆ.

ಶುಕ್ರವಾರ ಸಂಜೆ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಧಾಳಿಸಿ ನಡೆಸಿದ್ದು ಪಂಜಿಮೊಗರು ಸಮೀಪದಲ್ಲಿ ಆರೋಫಿಗಳು ಆಟೋರಿಕ್ಷಾ ನಿಲ್ಲಿಸಿಕೊಂಡು ಸಾರ್ವಜನಿಕರನ್ನು ನಂಬಿಸಿ ಅವರಿಂದ ಹಣ ಪಡೆದು ಚೀಟಿಯಲ್ಲಿ ಅಂಕಿಗಳನನ್ನು ಬರೆದು ಅದೃಷ್ಟದ ಚೀಟಿ ಬರೆಯುತ್ತಿದ್ದ ವೇಳೆ ಬಂಧಿಸಿದ್ದಾರೆ.

ಬಂಧಿತರಿಂದ 74,250 ರೂ ನಗದು, ಅಂಕಿ ಬರೆಯಲು ಉಪಯೋಗಿಸಿದ ಹಾಳೆ, ಪೆನ್ 50 ಸಾವಿರ ಮೌಲ್ಯದ ಆಟೋರಿಕ್ಷ ಹಾಗೂ ನಾಲ್ಕು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದ್ದು, ಸ್ವಾಧೀನ ಪಡಿಸಿಕೊಳ್ಳಲಾದ ಸೊತ್ತುಗಳ ಮೌಲ್ಯ ರೂ 1.28 ಎಂದು ಅಂದಾಜಿಸಲಾಗಿದೆ.