ಮಣಿಪಾಲದಲ್ಲಿ ಗುಡ್ಡಜರಿತ; ಅಪಾಯದಲ್ಲಿ ಬಹು ಮಹಡಿ ವಸತಿ ಸಮುಚ್ಛಯ!

Spread the love

ಮಣಿಪಾಲದಲ್ಲಿ ಗುಡ್ಡಜರಿತ; ಅಪಾಯದಲ್ಲಿ  ಬಹು ಮಹಡಿ ವಸತಿ ಸಮುಚ್ಛಯ!

ಉಡುಪಿ: ಜಿಲ್ಲೆಯಲ್ಲಿ ಕಳೆದೆರೆಡು ದಿನಗಳಿಂದ ಕಾಣಿಸಿಕೊಂಡ ಮಹಾಮಳೆಗೆ ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳಿ ಬಹುಮಹಡಿ ವಸತಿ ಸಮುಚ್ಛಯದ ಪಕ್ಕದಲ್ಲಿ ಭೂಕುಸಿತ ಕಾಣಿಸಿಕೊಂಡಿದೆ.

ಮಲ್ಪೆ ಮೊಣಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಪ್ರೀಮಿಯರ್ ಅಪಾರ್ಟ್ಮೆಂಟ್ ಎಂಬ ಕಟ್ಟಡದ ಪಕ್ಕದಲ್ಲಿ ಮಣ್ಣು ಕುಸಿಯುತ್ತಿದ್ದು ಕಟ್ಟಡದಲ್ಲಿರುವ ಎಲ್ಲರಿಗೂ ಮನೆ ತೆರವು ಮಾಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಸ್ಥಳಕ್ಕೆ ನಗರಸಭಾ ಪೌರಾಯುಕ್ತ ಆನಂದ ಕಲ್ಲೋಳಿಕರ್, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಹಾಗೂ ಇತರ ಹಲವಾರು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮುಂಜಾಗೃತೆ ಕೈಗೊಂಡಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗವನ್ನು ಪೊಲೀಸರು ಸಂಚಾರಕ್ಕೆ ನಿರ್ಬಂಧಿಸಿದ್ದಾರೆ.


Spread the love