ಮಣಿಪಾಲ: ತಂತ್ರಜ್ಞಾನ ಬಳಿಸಿ ವ್ಯಕ್ತಿಯ 40.84 ಲಕ್ಷ ಹಣ ವಂಚನೆ

Spread the love

ಮಣಿಪಾಲ:ಅಂತರ್ಜಾಲದಲ್ಲಿ ತಂತ್ರಜ್ಞಾನವನ್ನು ಉಪಯೋಗಿಸಿ ವ್ಯಕ್ತಿಯೋರ್ವರ ಸುಮಾರು 40,84,200/- ರೂಪಾಯಿ ಹಣವನ್ನು ನಗದಿಕರಿಸಿ ವಂಚಿಸಿದ ಕುರಿತು ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.

ಆರ್ತಿ ಪೂಜಾರಿ ವಾಸ:ಪಿ-530, ಬಿಲ್ಡಿಂಗ್ ನಂಬ್ರ-30, ಸ್ಟ್ರೀಟ್ -4 ಮೂರೂರು, ಅಬುದಾಬಿ, ಯುನೈಟೆಡ್ ಅರಬ್ ಎಮಿರೆಟ್ಸ್‌ರವರು ಐಸಿಐಸಿಐ ಬ್ಯಾಂಕ್ ಮಣಿಪಾಲ ಶಾಖೆಯಲ್ಲಿ ಖಾತೆಯನ್ನು ಹೊಂದಿದ್ದು, ಸದ್ರಿ ಖಾತೆಯಿಂದ ದಿನಾಂಕ:30/04/2015 ಮತ್ತು ದಿನಾಂಕ:21/04/2015 ರ ನಡುವೆ ಬೇರೆ ಬೇರೆ ದಿನಗಳಲ್ಲಿ ಅಂತರ್ಜಾಲದಲ್ಲಿ ಯಾವುದೋ ತಂತ್ರಜ್ಞಾನವನ್ನು ಬಳಸಿ ಆರ್ತಿ ಪೂಜಾರಿರವಗೆರಿಗೆ ತಿಳಿಯದಂತೆ ಸುಮಾರು 40,84,200/- ರೂಪಾಯಿ ಹಣವನ್ನು ನಗದೀಕರಿಸಿ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮಣಿಪಾಲ ಪೋಲಿಸರು INFORMATION TECHNOLOGY ACT 2008 & 420 ನಂತೆ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.


Spread the love