ಮದುವೆಯಾಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರ – ಆರೋಪಿ ಬಂಧನ

Spread the love

ಮದುವೆಯಾಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರ – ಆರೋಪಿ ಬಂಧನ

ಮಂಗಳೂರು: ಅಪ್ರಾಪ್ತ ಯುವತಿಯನ್ನು ಮದುವೆಯಾಗುವುದಾಗಿ ಹೇಳಿ ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಯುವತಿಯ ಸೋದರ ಸಂಭಂಧಿ ಸೋಮಶೇಖರ ಎಂದು ಗುರುತಿಸಲಾಗಿದೆ.

ಆರೋಪಿಯ ಇತ್ತೀಚೆಗೆ ಸುಮಾರು ನಾಲ್ಕು ತಿಂಗಳ ಹಿಂದೆ ಯುವತಿಯು ತನ್ನ ಅಜ್ಜ ಅಜ್ಜಿ ಮತ್ತು ಇತರರೊಂದಿಗೆ ಕೂಲಿ ಕೆಲಸಕ್ಕೆಂದು ಬಂಟ್ವಾಳ ತಾಲ್ಲೂಕು ಚೆನೈತ್ತೊಡಿ ಗ್ರಾಮದ ಮಾವಿನಕಟ್ಟೆ ಎಂಬಲ್ಲಿಗೆ ಬಂದವರು ಹಗಲು ಕೂಲಿ ಕೆಲಸ ಮಾಡಿ ರಾತ್ರಿ ಸಮಯದಲ್ಲಿ ಸಂಬಂಧಿಕರೊಂದಿಗೆ ಹಾಗೂ ಸೋಮಶೇಖರ್ ನೊಂದಿಗೆ ಬಂದು ತಾತ್ಕಾಲಿಕ ಟೆಂಟ್ ನಲ್ಲಿ ವಾಸ್ತವ್ಯ ಇರುವ ಸಮಯ 2019 ನೇ ಜನವರಿ ತಿಂಗಳ 5 ನೇ ತಾರೀಕಿನಂದು ರಾತ್ರಿ ಸಮಯ ಸುಮಾರು 11.30 ಕಾಲದಲ್ಲಿ ಎಲ್ಲರೂ ಒಟ್ಟಿಗೆ ಮಲಗಿದ್ದ ಸಮಯ ಸೋಮಶೇಖರನು ಅಪ್ರಾಪ್ತ ವಯಸ್ಸಿನ ಯುವತಿ ಮಲಗಿದಲ್ಲಿಗೆ ಬಂದು ಅವಳಲ್ಲಿ ನಾನು ನಿನ್ನನ್ನು ಮದುವೆಯಾಗುತ್ತೇನೆಂದು ಹೇಳಿ ಪಿರ್ಯಾದಿದಾರರ ಮೇಲೆ ಆಗಾಗ ದೈಹಿಕ ಸಂಪರ್ಕ ನಡೆಸಿದ್ದರಿಂದ ಪಿರ್ಯಾದಿದಾರರು ಗರ್ಭಧರಿಸಲು ಆರೋಪಿ ಕಾರಣನಾಗಿರುತ್ತಾನೆ.

ಈ ಕುರಿತು ಪಂಜಾಲಕಟೆ ಪೊಲೀಸ್ ಠಾಣೆಯಲ್ಲಿ ಕಲಂ 376. ಭಾ ದಂ ಸಂ ಮತ್ತು ಕಲಂ.6 ಪೋಕ್ಸೋ ಕಾಯಿದೆ 2012 ರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.


Spread the love