ಮನೆಯಲ್ಲಿದ್ದ ವ್ಯಕ್ತಿಗಳ ಮೇಲೆ ಲಾಂಗು, ಮಚ್ಚುಗಳಿಂದ ಹಲ್ಲೆ

Spread the love

ಮನೆಯಲ್ಲಿದ್ದ ವ್ಯಕ್ತಿಗಳ ಮೇಲೆ ಲಾಂಗು, ಮಚ್ಚುಗಳಿಂದ ಹಲ್ಲೆ

ಮಂಗಳೂರು: ಮನೆಯಲ್ಲಿದ್ದ ವ್ಯಕ್ತಿಗಳ ಮೇಲೆ ಲಾಂಗು, ಮಚ್ಚುಗಳಿಂದ ಹಲ್ಲೆ ಮಾಡಿರುವ ಘಟನೆ ಶನಿವಾರ ರಾತ್ರಿ ಮಂಗಳೂರಿನ ಉಳ್ಳಾಲ ದರ್ಗಾ ಬಳಿ ನಡೆದಿದೆ.

ಮನೆ ಮಾಲೀಕ ಖಾಸೀಮ್ ಹಾಗೂ ಆತನ ಪತ್ನಿ ಮೈಮುನಾ ಮಕ್ಕಳಾದ ಸೋಯಲ್ ಮತ್ತು ಅಮೀನ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಖಾಸಿಮ್‍ನ ಮತ್ತೊಬ್ಬ ಮಗ ಹಂಝ್‍ನನ್ನು ಕೊಲೆ ಮಾಡಲು ರೌಡಿ ಶೀಟರ್ ದಾವೂದ್ ಉಳ್ಳಾಲ ಹಾಗೂ ಅವನ ತಂಡ ಬಂದಿದ್ದರು. ಹಂಝ್ ಮನೆಯಲ್ಲಿ ಇಲ್ಲದ ಕಾರಣ ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿ ಮನೆಯ ಕಿಟಕಿ, ಬಾಗಿಲುಗಳನ್ನು ಪುಡಿಗೈದಿದ್ದಾರೆ.

ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲ ದಿನಗಳ ಹಿಂದೆ ಒಂದು ಗುಂಪಿನೊಂದಿಗೆ ಹಂಝ್ ಜಗಳವಾಡಿಕೊಂಡಿದ್ದ. ಈ ಹಿನ್ನಲೆಯಲ್ಲಿ ತಂಡವು ದಾಳಿ ನಡೆಸಿದೆ ಎಂದು ಶಂಕಿಸಲಾಗಿದೆ.

ಮಂಗಳೂರು ಹೊರವಲಯದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ದಾವುದ್ ಉಳ್ಳಾಲ, ಇಮ್ರಾನ್, ಅಲ್ರಾಫ್, ಇಲ್ಯಾಸ್, ಸಮೀರ್, ನಾಸಿರ್, ಸಮೀರ್ ಕಡಪ್ಪ ಹಾಗೂ ಇನ್ನೂ ಇತರರ ವಿರುದ್ಧ ದೂರು ದಾಖಲಾಗಿದೆ.


Spread the love