ಮರಳು ವ್ಯಾಪಾರಿ ಸಹಿತ ಇಬ್ಬರು ಯುವಕರಿಗೆ ಚೂರಿ ಇರಿತ

Spread the love

ಮರಳು ವ್ಯಾಪಾರಿ ಸಹಿತ ಇಬ್ಬರು ಯುವಕರಿಗೆ ಚೂರಿ ಇರಿತ
ಬೆಳ್ತಂಗಡಿ: ಮರಳು ವ್ಯಾಪಾರಿ ಸಹಿತ ಇಬ್ಬರು ಯುವಕರಿಗೆ ಚೂರಿಯಿಂದ ಇರಿದು ಗಂಭೀರ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ಯುವಕರನ್ನು ಬಂಟ್ವಾಳ ತಾಲೂಕಿನ ಕೊಲ್ತಮಜಲು ಗ್ರಾಮದ ಪಳ್ಳಿಪಾಡಿ ನಿವಾಸಿಗಳಾದ ಮಹಮ್ಮದ್ ಇರ್ಪಾಣ್ ಮತ್ತು ನಿಸಾರ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಯುವಕರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮರಳು ವ್ಯಾಪಾರಿಯಾಗಿರುವ ಇರ್ಫಾನ್ ಅವರಿಗೆ ಮದುವೆ ಆಮಂತ್ರಣ ನೀಡಲು ಗುರುವಾಯನಕೆರೆಗೆ ರವಿವಾರ ನಿಸಾರ್ ಎಂಬವರ ರಿಕ್ಷಾದಲ್ಲಿ ತೆರಳಿದ್ದರು. ಅಲ್ಲಿಂದ ವಾಪಾಸ್ ಬರುತ್ತಿದ್ದ ವೇಳೆ ಮಾರ್ಗದ ಮಧ್ಯೆ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದೆ ಎಂದು ತಿಳಿದು ಬಂದಿದೆ.
ಹಲ್ಲೆಗೊಳಗಾದವರನ್ನು ಚಿಕಿತ್ಸೆ ನೀಡಲಾಗುತ್ತಿದ್ದು ಅವರಿಂದ ಮಾಹಿತಿ ಪಡೆದ ಬಳಿಕ ಸತ್ಯಾಂಶ ತಿಳಿದು ಬರಲಿದೆ.
ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love