ಮರವಂತೆ ಅಂಚೆ ಕಚೇರಿ ಕಳ್ಳತನಕ್ಕೆ ಯತ್ನ: ಆರೋಪಿ ಬಂಧನ

Spread the love

ಮರವಂತೆ ಅಂಚೆ ಕಚೇರಿ ಕಳ್ಳತನಕ್ಕೆ ಯತ್ನ: ಆರೋಪಿ ಬಂಧನ

ಕುಂದಾಪುರ: ಮರವಂತೆ ಅಂಚೆ ಕಚೇರಿ ಕಳ್ಳತನಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಗಂಗೊಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಮರವಂತೆ ಅಂಚೆ ಕಚೇರಿಯಲ್ಲಿ ನಡೆದ ಕಳ್ಳತನ ಪ್ರಯತ್ನಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿದ್ದ ಗಂಗೊಳ್ಳಿ ಪೊಲೀಸರು ಪರಿಸರದ ಸಿಸಿ ಕ್ಯಾಮರಾದ ದೃಶ್ಯದ ಆಧಾರದಲ್ಲಿ ಆರೋಪಿಗಳ ಜಾಡು ಪತ್ತೆಗೆ ಮುಂದಾಗಿದ್ದರು. ಆರೋಪಿಯ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು ಮಂಗಳವಾರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಜಾಲಿ ರಸ್ತೆ ಕ್ರಾಸ್‌ ಎಂಬಲ್ಲಿ ಫೌಜಾನ್‌ ಅಹಮ್ಮದ್‌(19 ) ಹಾಗೂ ಇನ್ನೊರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

ಆರೋಪಿ ಫೌಜಾನ್’ನನ್ನು ಬಂಧಿಸಿ ಮಂಗಳವಾರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ. ಆರೋಪಿಯಿಂದ ಕೃತ್ಯಕ್ಕೆ ಬಳಸಿದ ಕೆಎ 30 ಎಲ್ 0097 ನಂಬರ್ ನ ಟಿ.ವಿ.ಎಸ್‌ ಮೋಟಾರ್‌ ಸೈಕಲ್‌ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಗಂಗೊಳ್ಳಿ ಪೊಲೀಸ್ ಠಾಣಾ ಪಿಎಸ್ಐ ಹರೀಶ್.ಆರ್ ನಾಯ್ಕ್ ಮತ್ತು ಅಪರಾಧ ವಿಭಾಗದ ಪಿಎಸ್ಐ ಬಸವರಾಜ ಕನಶೆಟ್ಟಿ ಹಾಗೂ ಸಿಬ್ಬಂದಿಗಳಾದ ಸಂದೀಪ ಕುರಾಣಿ, ರಾಜು ನಾಯ್ಕ, ನಾಗರಾಜ ಹಾಗೂ ದಿನೇಶ್‌ ಕಾರ್ಯಾಚರಣೆಯಲ್ಲಿದ್ದರು.


Spread the love
Subscribe
Notify of

0 Comments
Inline Feedbacks
View all comments