ಮಲ್ಪೆ :ಅಪ್ರಾಪ್ತ ಸಹೋದರಿಯ ಮೇಲೆ ಒಡಹುಟ್ಟಿದ ಸಹೋದರನಿಂದ ಅತ್ಯಾಚಾರ; ಬಂಧನ

Spread the love

ಮಲ್ಪೆ : ಅಪ್ರಾಪ್ತ ವಯಸ್ಸಿನ ತನ್ನ ಒಡಹುಟ್ಟಿದ ತಂಗಿಯ ಮೇಲೆ ಅತ್ಯಾಚಾರ ಎಸಗಿ ಗರ್ಭವತಿಯನ್ನಾಗಿಸಿದ ಸಹೋದರನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಸಂತೆಕಟ್ಟೆ ಸಮೀಪದ ನೇಜಾರಿನ ಶಂಕರ ಎಂಬವರ ಮಗ ಶ್ರೀಧರ್‌(22) ಎಂದು ಗುರುತಿಸಲಾಗಿದೆ. ಈತ 2015 ಜೂನ್‌ನಿಂದ ಹಲವು ಬಾರಿ 14ವರ್ಷ ವಯಸ್ಸಿನ ತನ್ನ ತಂಗಿಯ ಮೇಲೆ ಅತ್ಯಾಚಾರ ಎಸಗಿದ್ದನು. ಇದರ ಪರಿಣಾಮ ಸೆಪ್ಟಂಬರ್‌ ತಿಂಗಳಲ್ಲಿ ಆಕೆ ಗರ್ಭವತಿಯಾದಳು. ಈ ವಿಚಾರ ಆಕೆಯ ತಂದೆಯ ಗಮನಕ್ಕೆ ಬಂತು. ಆದರೆ ಇದಕ್ಕೆ ಕಾರಣ ಯಾರೆಂಬುದು ತಿಳಿದಿ ರಲಿಲ್ಲ. ಆಕೆ ಕೂಡ ಈ ವಿಚಾರವನ್ನು ಮುಚ್ಚಿಟ್ಟಿದ್ದಳು. ಈ ಬಗ್ಗೆ ಆಕೆಯ ತಂದೆ 2015ರ ಸೆ.16ರಂದು ಮಲ್ಪೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಉಡುಪಿ ವೃತ್ತ ಪೊಲೀಸ್‌ ನಿರೀಕ್ಷಕ ಶ್ರೀಕಾಂತ್‌ ನೇತೃತ್ವದ ತಂಡ ತನಿಖೆ ಕೈಗೆತ್ತಿಕೊಂಡು ಹಲವು ಮಂದಿಯನ್ನು ವಿಚಾರಣೆಗೆ ಒಳಪಡಿಸಿತು. ಅದೇ ರೀತಿ ಆಕೆಯ ಸಹೋದರನನ್ನು ಕೂಡ ವಿಚಾರಿಸಲಾಗಿತ್ತು. ಆದರೆ ಆತ ಯಾವುದೇ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಸಂಶಯಗೊಂಡ ಪೊಲೀಸರು ಶ್ರೀಧರ್‌ ಸೇರಿದಂತೆ ನಾಲ್ವರನ್ನು ನ.26ರಂದು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದರು. ಈ ಮಧ್ಯೆ ಉಡುಪಿ ನ್ಯಾಯಾಲಯದ ಆದೇಶದಂತೆ ಆಕೆ‌ಯ ಗರ್ಭವನ್ನು ತೆಗೆಯ ಲಾಯಿತು. ಡಿಎನ್‌ಎ ಪರೀಕ್ಷೆಯ ವರದಿಯು ಫೆ.8ರಂದು ಪೊಲೀಸರ ಕೈಸೇರಿದ್ದು, ಅದರಿಂದ ಸಹೋದರ ಶ್ರೀಧರನೇ ಆಕೆಯ ಮೇಲೆ ಅತ್ಯಾಚಾರ ಎಸಗಿರುವುದು ದೃಢಪಟ್ಟಿತ್ತು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಫೆ.9ರಂದು ಶ್ರೀಧರನನ್ನು ನೇಜಾರಿನಲ್ಲಿ ಪೋಕ್ಸೊ ಕಾಯ್ದೆಯಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆತನಿಗೆ ಫೆ.23ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.


Spread the love