ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಆಗಮಿಸಿದ ವ್ಯಕ್ತಿ ಹೃದಯಾಘಾತದಿಂದ ಸಾವು

Spread the love

ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಆಗಮಿಸಿದ ವ್ಯಕ್ತಿ ಹೃದಯಾಘಾತದಿಂದ ಸಾವು

ಕಡಬ: ವ್ಯಕ್ತಿಯೋರ್ವರು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಆಗಮಿಸಿದ ವೇಳೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಕಡಬ ನಿವಾಸಿ ಅಬ್ದುಲ್ ಖಾದರ್ (65) ಎಂದು ಗುರುತಿಸಲಾಗಿದೆ.

ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕಡಬ ಪೇಟೆಯಲ್ಲಿರುವ ಮಸೀದಿಯೊಂದರಲ್ಲಿ ಧಾರ್ಮಿಕ ಕ್ರಿಯೆ ನೆರವೇರಿಸುತ್ತಿದ್ದ ಅಬ್ದುಲ್ ಖಾದರ್ ಎಂಬುವರು ಬೆಳಿಗ್ಗಿನ ಜಾವ ಸುಮಾರು 04:45 ಸದರಿ ಮಸೀದಿಗೆ ಧಾರ್ಮಿಕ ಕ್ರಿಯೆ ನೆರವೇರಿಸಲು ಹೋಗಿದ್ದ ಕುಸಿದು ಬಿದ್ದಿದ್ದು, ಈ ವೇಳೆ ಸ್ಥಳದಲ್ಲಿದ್ದ ಖಾದರ್ ಎಂಬುವರು ಆರೈಕೆ ಮಾಡಿ ಮನೆಗೆ ಕರೆತಂದು ಖಾಸಗಿ ವೈದ್ಯರ ಮೂಲಕ ಪರೀಕ್ಷಿಸಿದಾಗ ಅಬ್ದುಲ್ ಖಾದರ್ ರವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿರುತ್ತದೆ.

ಕಡಬ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.


Spread the love