ಮಹಾತ್ಮ ಗಾಂಧಿಗೆ ಅವಹೇಳನ ಮಾಡಿದ ನಳಿನ್ ಗೆ ಬಿಜೆಪಿ ಅಧ್ಯಕ್ಷರಾಗಿ ಪ್ರಮೋಷನ್ ನೀಡಿದೆ : ರಮಾನಾಥ ರೈ

ಮಹಾತ್ಮ ಗಾಂಧಿಗೆ ಅವಹೇಳನ ಮಾಡಿದ ನಳಿನ್ ಗೆ ಬಿಜೆಪಿ ಅಧ್ಯಕ್ಷರಾಗಿ ಪ್ರಮೋಷನ್ ನೀಡಿದೆ : ರಮಾನಾಥ ರೈ

ಉಡುಪಿ: ಮಹಾತ್ಮಾಗಾಂಧಿಯವರನ್ನು ನಳಿನ್ ಕುಮಾರ್ ಕಟೀಲ್ ಅವಹೇಳನ ಮಾಡಿದಾಗ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷರಾಗಿದ್ದ ಅಮಿತ್ ಶಾ ಇದನ್ನು ಸಹಿಸೋಲ್ಲ ಎಂದು ಹೇಳಿದವರು ಇಂದು ಅವರನ್ನೇ ಕರ್ನಾಟಕ ಬಿಜೆಪಿ ರಾಜ್ಯಧ್ಯಕ್ಷರನ್ನಾಗಿ ನೇಮಿಸಿ ಅವರಿಗೆ ಪ್ರಮೋಷನ್ ನೀಡಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ವ್ಯಂಗ್ಯವಾಡಿದ್ದಾರೆ.

ಉಡುಪಿಯಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ ನಳಿನ್ ಕುಮಾರ್ ಕಟೀಲ್ ಬಹಳ ಬುದ್ದಿವಂತರಿರಬಹುದು ಆದರೆ ಅವರು ಮಹಾತ್ಮ ಗಾಂಧಿಜಿ ಬಗ್ಗೆ ಅವಹೇಳನ ಮಾಡಿದವರು ಮಹಾತ್ಮ ಗಾಂಧಿಗೆ ಅಪಮಾನ ಮಾಡಿದಕ್ಕೆ ಅಧ್ಯಕ್ಷಗಿರಿ ಸಿಕ್ಕಿದೆ ಇದರಿಂದ ನಳಿನ್ ಅವರಿಗೆ ಪ್ರಥಮ ಸ್ಥಾನ ನಳಿನ್ ಕುಮಾರ್ ಕಟೀಲ್ ಗೆ ಸಿಕ್ಕಿದೆ ಎಂದರು.

ಮಂಗಳೂರಿನ ಜನ ನಳೀನ್ ಕುಮಾರ್ ಕಟೀಲ್ ಮುಖ ನೋಡಿ ಓಟು ಕೊಟ್ಟಿಲ್ಲ ಬದಲಾಗಿ ಮೋದಿ ಮುಖ ನೋಡಿ ಮತ ಹಾಕಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಜನ ಮೇಲೆ ನೋಡುತ್ತಲೆ ನಿಂತಿದ್ದಾರೆ ಇನ್ನು ಕೂಡಾ ಕೆಳಗೆ ನೋಡಿಲ್ಲ ಈಗ ಆಕಾಶ ನೋಡುವ ಪರಿಸ್ಥಿತಿ ಇಲ್ಲಿನ ಜನರಿಗಾಗಿದೆ ಎಂದರು. ನಳಿನ್ ಕುಮಾರ್ ಕಟೀಲ್ ಯಾವುದೇ ಸಾಧನೆ ಮಾಡಿದ ಚರಿತ್ರೆ ಇತಿಹಾಸ ಇಲ್ಲ ಎಂದರು.