ಮಹಾನಗರ ಪಾಲಿಕೆಯ ಜನಸಮಾನ್ಯರ ಸಮಸ್ಯೆಗಳನ್ನು ಸರಿಪಡಿಸಲು ಆಗ್ರಹ

Spread the love

ಮಹಾನಗರ ಪಾಲಿಕೆಯ ಜನಸಮಾನ್ಯರ ಸಮಸ್ಯೆಗಳನ್ನು ಸರಿಪಡಿಸಲು ಆಗ್ರಹ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯು ಕಳೆದ ಹಲವು ವರ್ಷಗಳಿಂದ ನೀರಿನ ಮಾಪನ ಬಿಲ್ ಮಾಡಲು ಹೊರಗುತ್ತಿಗೆದಾರರಿಗೆ ವಹಿಸಿದ್ದು ಸಮರ್ಪಕವಾಗಿ ಬಿಲ್ಲುಗಳನ್ನು ಕೊಡದೆ ಜನಸಮಾನ್ಯರು ತೊಂದರೆಯನ್ನು ಅನುಭವಿಸುತ್ತಾ ಇದ್ದರು. ಇದೀಗ ಈ ವ್ಯವಸ್ಥೆಯನ್ನು ರದ್ದು ಮಾಡಿ ಮಹಾನಗರ ಪಾಲಿಕೆಯ ಸಿಬ್ಬಂದಿಯವರು ಬಿಲ್ಲನ್ನು ಮಾಡಲು ಹೊರಟ್ಟಿದ್ದು ಬಿಲ್ಲುಗಳನ್ನು ತಪ್ಪಾಗಿ ಕೊಟ್ಟಿದ್ದು ಜನಸಮಾನ್ಯರಿಗೆ ಹತ್ತು ಪಟ್ಟು ಇಪ್ಪತ್ತು ಪಟ್ಟು ಬಿಲ್ಲುಗಳು ಬಂದಿದ್ದು ಇದರಿಂದ ಜನಸಮಾನ್ಯರು ತಮ್ಮ ದಿನನಿತ್ಯದ ಕೆಲಸವನ್ನು ಬಿಟ್ಟು ಕಛೇರಿಗೆ ಅಲೆದಾಡುವ ಪರಿಸ್ಥಿತಿ ಉದ್ಬವಿಸಿದೆ. ಈ ಬಿಲ್ಲುಗಳು ತಾಳೆ ಆಗದಿರಲು ಮಹಾನಗರ ಪಾಲಿಕೆ ಹಾಗೂ ಹೊರ ಗುತ್ತಿಗೆದಾರರ ಹೊಂದಣಿಕೆ ಇಲ್ಲದಿರುವುದೇ ಕಾರಣ. ಇದನ್ನು ಕೂಡಲೆ ಸರಿ ಪಡಿಸಲು ಮಹಾನಗರ ಪಾಲಿಕೆಯ ಆಯುಕ್ತರಲ್ಲಿ ಮನವಿಯನ್ನು ಮಾಡುತ್ತೇವೆ ಮಾತ್ರವಲ್ಲ ಜನಸಮಾನ್ಯರು ತೆರಿಗೆ, ನೀರಿನ ಬಿಲ್, ಟ್ರೇಡ್ ಲೈಸನ್ಸ್ ಇದರ ಚಲನ್ ಕಟ್ಟಲು ಬ್ಯಾಂಕಿಗೆ, ಮಂಗಳೂರು ಒನ್ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲುವುದು ಇದು ಸ್ಮಾರ್ಟ್ ಸಿಟಿ ಆಗುವ ಲಕ್ಷಣವೇ? ಈ ಬಗ್ಗೆ ಜನಸಮಾನ್ಯರಿಗೆ ಇಸಿಎಸ್, ಆನ್ ಲೈನಲ್ಲಿ ಹಣ ಕಟ್ಟುವ ವ್ಯವಸ್ಥೆ ಕೂಡಲೇ ಜ್ಯಾರಿ ಗೊಳಿಸಬೇಕೆಂದು ಜೆಡಿಎಸ್ ಜಿಲ್ಲಾ ಜನತಾದಳ ವಕ್ತಾರ ಸುಶೀಲ್ ನೊರೊನ್ಹರವರು ಆಗ್ರಹಿಸಿದ್ದಾರೆ.


Spread the love