ಮಹಿಳೆಯರು ದೌರ್ಜನ್ಯದ ವಿರುದ್ಧ ಧ್ವನಿಯೆತ್ತಿ: ಕಬ್ಬಾಳ್‍ರಾಜ್ ಹೆಚ್.ಡಿ.

ಮಹಿಳೆಯರು ದೌರ್ಜನ್ಯದ ವಿರುದ್ಧ ಧ್ವನಿಯೆತ್ತಿ: ಕಬ್ಬಾಳ್‍ರಾಜ್ ಹೆಚ್.ಡಿ.

ಕೋಟ: ಇಂದು ಸಮಾಜದಲ್ಲಿ ಸಾಕಷ್ಟು ಮಹಿಳಾ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದರು ಕೂಡ ಮಹಿಳೆಯರು ಇದರ ವಿರುದ್ಧ ಧ್ವನಿಯೆತ್ತುತ್ತಿಲ್ಲ. ಇದನ್ನೇ ರಾಜಕೀಯ ಪಕ್ಷಗಳು, ಜಾತಿ ಸಂಘಟನೆಗಳು ಅವಕಾಶವನ್ನಾಗಿಸಿಕೊಂಡು ಮಧ್ಯ ಪ್ರವೇಶ ಮಾಡಿ. ಅಧಿಕಾರಿಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಿದೆ. ಎಲ್ಲಿಯವರೆಗೆ ಮಹಿಳೆಯರು ತಮ್ಮ ಮೇಲಾಗುವ ದೌರ್ಜನ್ಯದ ವಿರುದ್ಧ ಧ್ವನಿಯೆತ್ತುದಿಲ್ಲವೋ ಅಲ್ಲಯವರೆಗೆ ಸಮಾಜದಲ್ಲಿ ಇಂತ ಪ್ರಕರಣಗಳು ನಡೆಯುತ್ತಿರುತ್ತದೆ ಎಂದು ಕೋಟ ಪೊಲೀಸ್ ಠಾಣಾ ಉಪನಿರೀಕ್ಷಕ ಕಬ್ಬಾಳ್‍ರಾಜ್ ಹೆಚ್.ಡಿ. ಹೇಳಿದರು.

legal-awarness-kota legal-awarness-kota-00 legal-awarness-kota-01 legal-awarness-kota-02

ಅವರು ಸಾಸ್ತಾನ ಗುಂಡ್ಮಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾರ್ಕೂರು ವಲಯ – ಸಾಸ್ತಾನ ಒಕ್ಕೂಟದ ತ್ರೈಮಾಸಿಕ ಸಭೆಯಲ್ಲಿ ಆಯೋಜಿಸಲಾದ ಕಾನೂನು ಮಾಹಿತಿ ಶಿಬಿರವನ್ನು ಉದ್ಘಾಟಿಸಿ, ಮಾಹಿತಿ ನೀಡಿದರು. ಉಡುಪಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಮುಕ್ತಾಭಾಯಿ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ವಿಚಾರವಾಗಿ ಮಾಹಿತಿ ನೀಡಿದರು.

ಇದೇ ಸಂದರ್ಭ ಕೋಟ ಠಾಣೆಯ ಉಪನಿರೀಕ್ಷಕ ಕಬ್ಬಾಳ್‍ರಾಜ್ ಹೆಚ್.ಡಿ. ಅವರನ್ನು ಒಕ್ಕೂಟದ ವತಿಯಿಂದ ಗೌರವಿಸಲಾಯಿತು. ಒಕ್ಕೂಟದ ಅಧ್ಯಕ್ಷೆ ಇಂದಿರಾ ಹೊಳ್ಳ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಾರ್ಕೂರು ವಲಯದ ಮೇಲ್ವಿಚಾರಕರಾದ ಚೈತನ್ಯ ಎಸ್.ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ರಮೇಶ್ ಆಚಾರ್, ಒಕ್ಕೂಟದ ಉಪಾಧ್ಯಕ್ಷ ಪ್ರಕಾಶ್ ಆಚಾರ್ಯ, ಕಾರ್ಯದರ್ಶಿ ಅನಸೂಯ, ಕೋಶಾಧಿಕಾರಿ ಸಂಗೀತ ಉಪಸ್ಥಿತರಿದ್ದರು.

ಒಕ್ಕೂಟದ ಸರೋಜ ಸ್ವಾಗತಿಸಿದರು. ಒಕ್ಕೂಟದ ಸೇವಾ ಪ್ರತಿನಿಧಿ ಶೋಭ ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಸುಮಿತ್ರ ವಂದಿಸಿದರು.