ಮಾಜಿ ಶಾಸಕ ಗೋಪಾಲ ಭಂಡಾರಿ ನಿಧನ – ಸಂಸದೆ ಶೋಭಾ ಕರಂದ್ಲಾಜೆ ಸಂತಾಪ

ಮಾಜಿ ಶಾಸಕ ಗೋಪಾಲ ಭಂಡಾರಿ ನಿಧನ – ಸಂಸದೆ ಶೋಭಾ ಕರಂದ್ಲಾಜೆ ಸಂತಾಪ  

ಉಡುಪಿ: ಕಾರ್ಕಳದ ಮಾಜಿ ಶಾಸಕರಾದ ಗೋಪಾಲ ಭಂಡಾರಿಯವರ ನಿಧನಕ್ಕೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸಂತಾಪ ಸೂಚಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ ಹಾಗೂ ಕಾರ್ಕಳ ಕ್ಷೇತ್ರದ ಮಾಜಿ ಶಾಸಕ, ಮುತ್ಸದ್ದಿ ಸರಳ ಸಜ್ಜನ ವ್ಯಕ್ತಿಯಾದಂತಹ  ಗೋಪಾಲ ಭಂಡಾರಿಯವರು ನಿನ್ನೆ ಗುರುವಾರ  ಹೃದಯಾಘಾತದಿಂದ ದೈವಾಧೀನರಾದ ಸುದ್ಧಿ ತಿಳಿದು ಆಘಾತವಾಯಿತು ಜೊತೆಗೆ ಖೇದವಾಯಿತು. ನಿಷ್ಕಳಂಕ ಜನಸೇವಕನ ಅಗಲಿಕೆಯು ಕಾರ್ಕಳಕ್ಕೆ ಮಾತ್ರವಲ್ಲದೆ, ಸಮಗ್ರ ಕರ್ನಾಟಕಕ್ಕೆ ತುಂಬಲಾರದ ನಷ್ಟವುಂಟು ಮಾಡಿದೆ ಎಂದು   ಸಂಸದೆ ಶೋಭಾ ಕರಂದ್ಲಾಜೆಯವರು ಸಂತಾಪ ಸೂಚಿಸಿದ್ದಾರೆ.