ಮಾಜಿ ಸಚಿವ ಅಮರನಾಥ ಶೆಟ್ಟರಿಗೆ ಸಿಪಿಐ ಶ್ರದ್ಧಾಂಜಲಿ

Spread the love

ಮಾಜಿ ಸಚಿವ ಅಮರನಾಥ ಶೆಟ್ಟರಿಗೆ ಸಿಪಿಐ ಶ್ರದ್ಧಾಂಜಲಿ

ಮಂಗಳೂರು: ರಾಜ್ಯದ ಹಿರಿಯ ಮುಂದಾಳು, ಹಿರಿಯ ಹೋರಾಟಗಾರ, ಮಾಜಿ ಕಾರ್ಮಿಕ ಮಂತ್ರಿ, ಜನಪ್ರಿಯ ನಾಯಕ, ಕೋಮುಸಾಮರಸ್ಯದ ಬಗ್ಗೆ ಅತೀವ ಕಾಳಜಿ ಹೊಂದಿದ, ಅಮರಣ್ಣ ಎಂದೇ ಜನಪ್ರಸಿದ್ಧರಾದ ಅಮರನಾಥ ಶೆಟ್ಟರ ನಿಧನಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮಿತಿ ಸಂತಾಪ ಸೂಚಿಸುತ್ತದೆ ಮತ್ತು ಶ್ರದ್ಧಾಂಜಲಿ ಅರ್ಪಿಸಿದೆ.

ಜನಾನುರಾಗಿಯಾಗಿದ್ದ ಅಮರಣ್ಣ ಎಂದೂ ತಮ್ಮ ತತ್ವದೊಂದಿಗೆ ರಾಜಿ ಮಾಡಿಕೊಂಡಿಲ್ಲ. ಜಾತ್ಯಾತೀತ ಜನತಾ ದಳದ ಮುಂದಾಳಾಗಿದ್ದರೂ ಅವರು ಎಲ್ಲರೊಂದಿಗೆ ಒಳ್ಳೆಯ ಬಾಂದವ್ಯವನ್ನು ಹೊಂದಿದ್ದರು. ಕೋಮುಸಾಮರಸ್ಯದ ಬಗ್ಗೆ ಅತೀವ ಕಾಳಜಿಯಿದ್ದ ಅವರು ಆ ಬಗ್ಗೆ ಯಾವುದೇ ಕಾರ್ಯಕ್ರಮಗಳಿಗೆ ತಾನು ಮುಂದಾಗಿ ನಿಲ್ಲುತ್ತಿದ್ದರು. ಇತ್ತೀಚೆಗೆ ಎಲ್ಲಾ ವಿರೋಧ ಪಕ್ಷದವರು ಒಂದಾಗಿ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಬಗ್ಗೆ ನ್ಯಾಯಾಧೀಶರೊಬ್ಬರಿಂದ ತನಿಖೆ ಆಗಬೇಕು ಎಂದು ನಡೆಸಿದ ಧರಣಿಯಲ್ಲಿ ತಮ್ಮ ಅನಾರೋಗ್ಯವನ್ನು ಲೆಕ್ಕಿಸದೆ ಅವರೂ ಧರಣಿ ಕೂತಿದ್ದರು ಎಂದು ಜಿಲ್ಲಾ ಕಾರ್ಯದರ್ಶಿ ವಿ ಕುಕ್ಯಾನ್ ಪ್ರಕಟಣೆಯಲ್ಲಿ ತಿಳೀಸಿದ್ದಾರೆ.


Spread the love