ಮಾಜಿ ಸೇನಾ ಉದ್ಯೋಗಿಗಳಿಂದ  ಗೃಹ ಸಚಿವ ರಾಜನಾಥ್ ಸಿಂಗ್ ರಾಜೀನಾಮೆಗೆ ಆಗ್ರಹ

Spread the love

ನವದೆಹಲಿಯಲ್ಲಿ ಜಂತರ್ ಮಂತರ್ ಬಳಿ ನಿರಶನ ಮಾಡುತ್ತಿದ್ದ ಮಾಜಿ ಸೇನಾ ಉದ್ಯೋಗಿಗಳ ವಿರುದ್ಧ ‘ಪೆÇಲೀಸ್ ಕ್ರಮ’ ಕೈಗೊಂಡು ಸರ್ಕಾರವು ತಮಗೆ ‘ಅವಮಾನ’ ಮಾಡಿದೆ ಎಂದು ಹೇಳಿ, ಭಾರತ ಸೈನಿಕ ಕ್ಷೇಮಾಭಿವೃದ್ಧಿ ಮಿಷನ್ (ಸ್ವಿಮ್) ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ರಾಜೀನಾಮೆ ಆಗ್ರಹಿಸಿದೆ.

ಆಗಸ್ಟ್ 14 ರಂದು, 70-80 ರ ಪ್ರಾಯದ ಅನೇಕ ಮಾಜಿ ಸೇನಾ ಉದ್ಯೋಗಿಗಳು, ಅವರ ಮಡದಿಯರು ಹಾಗೂ ಯುದ್ಧದಲ್ಲಿ ಮೃತರಾದ ಸೈನಿಕರ ವಿಧವೆಯರು ‘ಒಂದು ರ್ಯಾಂಕ್ ಒಂದು ಹುದ್ದೆ ಕುರಿತು ಕೋಶ್ಯಾರಿ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಬೇಕೆಂದು ‘ಶಾಂತಿಯುತ’ವಾಗಿ ಬೇಡಿಕೆ ಸಲ್ಲಿಸುತ್ತ ನಿರಶನ ಮಾಡುತ್ತಿದ್ದಾಗ, ದೆಹಲಿಯ ಪೆÇಲೀಸ್ ಆಯುಕ್ತ ಬಿ.ಎಸ್. ಬಸ್ಸಿ ಅವರ ಪ್ರಚೋದನೆಯಿಂದ ಕೇಂದ್ರ ಗೃಹ ಸಚಿವರಾದ ರಾಜನಾಥ್ ಸಿಂಗ್ ಅವರು ಮಾಜಿ ಸೇನಾ ಉದ್ಯೋಗಿಗಳನ್ನು, ಅವರ ಮಡದಿಯರನ್ನು ಹಾಗೂ ಯುದ್ಧದಲ್ಲಿ ಮೃತರಾದ ಸೈನಿಕರ ವಿಧವೆಯರನ್ನು ನಿರಶನ ಸ್ಥಳದಿಂದ ಜಾಗ ಖಾಲಿ ಮಾಡಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಸ್ವಿಮ್‍ನ ರಾಷ್ಟ್ರೀಯ ಅಧ್ಯಕ್ಷ ಕೆ.ಎಸ್. ಭಾರತೀಯ ಹಾಗೂ ಉಪಾಧ್ಯಕ್ಷ ವಿಲಿಯಂ ಅಬ್ರಹಾಂ ಹೇಳಿದರು.

ಒಂದು ರ್ಯಾಂಕ್ ಒಂದು ಹುದ್ದೆಯಲ್ಲಿ ಕೋಶ್ಯಾರಿ ಸಮಿತಿ ಸಂಪೂರ್ಣ ಸಹಮತ ವ್ಯಕ್ತಪಡಿಸಿತ್ತು ಹಾಗೂ ಒಂದು ಪ್ರತ್ಯೆಕ ವಿಶೇಷ ಆಯೋಗ ಓಆರ್‍ಓಪಿ ನಿರ್ಧರಿಸಬೇಕು ಎಂಉ ಶಿಫಾರಿಸಿತ್ತು ಎಂದು ಅವರು ಹೇಳಿದರು.

ತನ್ನದೇ ಚುನಾವಣಾ ಪ್ರಣಾಳಿಕೆಯನ್ನು ಭಾ.ಜ.ಪ. ಹುಸಿಗೊಳಿಸಿದೆ ಹಾಗೂ 2014 ರ ಚುನಾವಣೆಯ ಸಂದರ್ಭದಲ್ಲಿ ಭಾ.ಜ.ಪ.ವು ಓಆರ್‍ಓಪಿ ಯನ್ನು ತನ್ನ ಪ್ರಣಾಳಿಕೆಯಲ್ಲಿ ಅಳವಡಿಸಿಕೊಂಡಿತ್ತು ಹಾಗೂ ವಿವಿಧ ರಾಜಕೀಯ ಸಭೆಗಳಲ್ಲಿ ನರೇಂದ್ರ ಮೋದಿಯವರು ಅನುಷ್ಠಾನದ ಬಗ್ಗೆ ಭರವಸೆ ನೀಡಿದ್ದು, ಈಗ ಪಕ್ಷವು ತನ್ನ ಪ್ರಣಾಳಿಕೆಯ ಈ ಅಂಶದಿಂದ ಹಿಂದೆ ಸರಿದಿದೆ ಎಂದು ಠೀಕಿಸಿದರು.

ಸರ್ಕಾರದ ಧೋರಣೆಯನ್ನು ಖಂಡಿಸುತ್ತ ಸಂಸ್ಥೆಯು ಪಕ್ಷವು ‘ಶಸ್ತ್ರ ಸೇನಾ ಪಡೆಯ ಜೊತೆಗಿದ್ದೇವೆ’ ಎನ್ನುವ ಮಾತುಗಳು ಕೇವಲ ಬೂಟಾತಿಕೆಯ ಮಾತುಗಳು ಎಂದು ಟೀಕಿಸಿದೆ ಹಾಗೂ 15/09/2015 ರಂದು ಗಾಂಧೀ ಭವನದಿಂದ ಫ್ರೀಡಂಮ್ ಪಾರ್ಕ್‍ವರೆಗೆ ಮಾಜಿ ಯೋಧರು ಮತ್ತು ಅವರ ಕುಟುಂಬದವರು ಹಾಗೂ ಯುದ್ಧದಲ್ಲಿ ಮೃತರಾದ ಯೋಧರ ಪತ್ನಿಯರು ಪ್ರತಿಭಟನೆ ನಡೆಸಲಿದ್ದಾರೆ.


Spread the love