ಮಾನಸಿಕ ಖಿನ್ನತೆ!: ನಾಲ್ಕುವರೆ ವರ್ಷದ ಮಗುವನ್ನು ಕೊಲೆಗೈದು, ತಾಯಿ ಆತ್ಮಹತ್ಯೆ

Spread the love

ಮಾನಸಿಕ ಖಿನ್ನತೆ!: ನಾಲ್ಕುವರೆ ವರ್ಷದ ಮಗುವನ್ನು ಕೊಲೆಗೈದು, ತಾಯಿ ಆತ್ಮಹತ್ಯೆ

ಮಂಗಳೂರು: ನಗರದ ಜೆಪ್ಪು ಸಮೀಪದ ಗುಜ್ಜರಕೆರೆ ಎಂಬಲ್ಲಿನ ಲೇಕ್ವೀವ್ ಅಪಾರ್ಟ್ಮೆಂಟ್ನಲ್ಲಿ ತಾಯಿ ತನ್ನ 4.5 ತಿಂಗಳಿನ ಗಂಡು ಮಗುವನ್ನು ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಿ ತಾನೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಖತಿಜಾತುಲ್ ಕುಬ್ರ ರವರ ಮಗಳು ಫಾತಿಮಾ ರುಕಿಯಾ (23) ಮತ್ತು ಅಕೆಯ ನಾಲ್ಕುವರೆ ತಿಂಗಳಿನ ಗಂಡು ಮಗು ಅಬ್ದುಲ್ ಹೂದ್ ಎಂದು ಗುರುತಿಸಲಾಗಿದೆ.

ಮಾಹಿತಿಗಳ ಪ್ರಕಾರ ಫಾತಿಮಾ ರುಕಿಯಾರಿಗೆ ಮುಹಮ್ಮದ್ ಉನೈಸ್ ಎಂಬವರೊಂದಿಗೆ ಒಂದುವರೆ ವರ್ಷದ ಹಿಂದೆ ವಿವಾಹವಾಗಿದ್ದು ಜುಲೈ ತಿಂಗಳಿನಲ್ಲಿ ಹೆರಿಗೆಯಾಗಿದ್ದು ನಾಲ್ಕುವರೆ ತಿಂಗಳಿನ ಗಂಡು ಮಗು ಇದ್ದು, ಫಾತಿಮಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಇದಕ್ಕಾಗಿ ಮಂಗಳೂರಿನಲ್ಲಿ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದು ಶನಿವಾರ ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದ ಸಮಯ ಫಾತಿಮಾ ರುಕಿಯಾ ತಾನು ವಾಸವಾಗಿದ್ದ ಮಂಗಳೂರು ನಗರದ ಗುಜ್ಜರಕೆರೆ ಲೇಕ್ ವ್ಯೂ ಅಪಾರ್ಟ್ಮೆಂಟ್ ನ ಫ್ಲಾಟ್ ನಂಬರ್ 507 ರ ಬೆಡ್ ರೂಮ್ ನ ಗ್ಯಾಲರಿಯಲ್ಲಿ ಪ್ಲಾಸ್ಟಿಕ್ ಟಬ್ ನಲ್ಲಿ ನೀರು ತುಂಬಿಸಿ 4.5 ತಿಂಗಳ ಮಗುವನ್ನು ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಿ, ತಾನೂ ಕೂಡ ರೂಮಿನ ಕಿಟಕಿಯ ಕಬ್ಬಿಣದ ಸರಳಿಗೆ ಸೀರೆಯಿಂದ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.


Spread the love