ಮುಂಡ್ಕೂರು ಮನೆಗಳ್ಳತನ ಪ್ರಕರಣದ ಆರೋಪಿ ಬಂಧನ

Spread the love

ಮುಂಡ್ಕೂರು ಮನೆಗಳ್ಳತನ ಪ್ರಕರಣದ ಆರೋಪಿ ಬಂಧನ

ಉಡುಪಿ : ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮುಂಡ್ಕೂರು ಎಂಬಲ್ಲಿ ಮೂರು ಮನೆಗಳಿಗೆ ನುಗ್ಗಿ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಒರ್ವನನ್ನು ಕಾರ್ಕಳ ಪೋಲಿಸರು ಮುಂಡ್ಕೂರು ಗ್ರಾಮದ ಇನ್ನಾ ಕ್ರಾಸ್ ಬಳಿ ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

2017 ನೇ ಸಾಲಿನಲ್ಲಿ ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮುಂಡ್ಕೂರು ಗ್ರಾಮದ ವಾಸಿ ಶ್ರೀ ಜಯ ಎನ್ ಶೆಟ್ಟಿ , ಶ್ರೀಮತಿ ಜ್ಯೋತಿ ಎನ್ ಶೆಟ್ಟಿ ಹಾಗೂ 2018 ನೇ ಸಾಲಿನಲ್ಲಿ ಮುಂಡ್ಕೂರು ಗ್ರಾಮದ ಶ್ರೀ ರಮೇಶ್ ಶೆಟ್ಟಿ ಎಂಬುವರ ಮನೆಯಿಂದ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ವರದಿಯಾಗಿತ್ತು.

ಪ್ರಕರಣಗಳ ಬಗ್ಗೆ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ, ಹಾಗೂ ಕಾರ್ಕಳ ಪೊಲೀಸ್ ಉಪಾಧೀಕ್ಷಕರವರ ಮಾರ್ಗದರ್ಶನದಂತೆ ಈ ಪ್ರಕರಣಗಳ ತನಿಖಾಧಿಕಾರಿಯಾದ ಜಾಯ್ ಅಂತೋನಿ. ಎ, ವೃತ್ತ ನಿರೀಕ್ಷಕರು, ಕಾರ್ಕಳ ವೃತ್ತ ಇವರ ನೇತೃತ್ವದಲ್ಲಿ ಕಾರ್ಕಳ ವೃತ್ತದ ಅಪರಾಧ ಪತ್ತೆ ತಂಡದೊಂದಿಗೆ ತನಿಖೆ ಪ್ರಾರಂಭಿಸಿ ದಿನಾಂಕ: 05.08.2018 ರಂದು ರಾತ್ರಿ 8:30 ಗಂಟೆಗೆ ಖಚಿತ ಮಾಹಿತಿಯ ಮೇರೆಗೆ ಮುಂಡ್ಕೂರು ಗ್ರಾಮದ ಇನ್ನಾ ಕ್ರಾಸ್ ಬಸ್ ನಿಲ್ದಾಣದ ಬಳಿ ಆರೋಪಿ ಶೈಲೇಶ್ ಶೆಟ್ಟಿ, ವಾಸ: ಮುಂಡ್ಕೂರು, ಎಂಬಾತನನ್ನು ವಶಕ್ಕೆ ತೆಗೆದುಕೊಂಡು ವಿಚಾರ ಮಾಡಲಾಗಿ ಮೇಲ್ಕಂಡ ಪ್ರಕರಣಗಳಲ್ಲಿ ಚಿನ್ನಾಭರಣಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡ ಮೇರೆಗೆ ಆರೋಪಿಯಿಂದ ಈ ದಿವಸ ಮೇಲ್ಕಂಡ ಪ್ರಕರಣಗಳಲ್ಲಿ ಕಳ್ಳತನವಾದ ಒಟ್ಟು 6 ಲಕ್ಷ ಮೌಲ್ಯದ ಸುಮಾರು 210 ಗ್ರಾಂ ಚಿನ್ನಾಭರಣಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಆರೋಪಿಯನ್ನು ಈ ದಿನ ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆರೊಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತಾರೆ.

ಈ ಪ್ರಕರಣದ ಪತ್ತೆ ಕಾರ್ಯಾಚರಣೆೆಯಲ್ಲಿ ಕಾರ್ಕಳ ವೃತ್ತ ನಿರೀಕ್ಷಕ ಜಾಯ್ ಆಂತೋನಿ. ಎ ಇವರ ನೇತೃತ್ವದ ಅಪರಾಧ ಪತ್ತೆ ತಂಡದಲ್ಲಿ ಕಾರ್ಕಳ ಗ್ರಾಮಾಂತರ ಠಾಣಾ ಪಿ.ಎಸ್.ಐ ಶ್ರೀ ವಾಸಪ್ಪ ನಾಯ್ಕ್ , ರಾಜೇಶ್, ಪ್ರಶಾಂತ್, ಗಿರೀಶ್, ಸತೀಶ್ ಬಟ್ವಾಡಿ, ರಮೇಶ್, ಅನ್ವರ್ ಆಲಿ ಚಾಲಕರಾದ ಜಗದೀಶ್ ಮತ್ತು ಗಿರಿದರ್ ಪೈ ಸಹಕರಿಸಿರುತ್ತಾರೆ.

ಕಾರ್ಕಳ ವೃತ್ತದ ಆಪರಾಧ ಪತ್ತೆ ತಂಡಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ರೂ 10000/- ಬಹುಮಾನ ಘೋಷಣೆ ಮಾಡಲಾಗಿದೆ.


Spread the love