ಮುಂದುವರೆದ ಪಕ್ಷಾಂತರ; ಪಲಿಮಾರಿನ ಜೆಡಿಎಸ್ 10 ಕ್ಕೂ ಹೆಚ್ಚು ಕಾರ್ಯಕರ್ತರು  ಕಾಂಗ್ರೆಸ್ ಸೇರ್ಪಡೆ

Spread the love

ಮುಂದುವರೆದ ಪಕ್ಷಾಂತರ; ಪಲಿಮಾರಿನ ಜೆಡಿಎಸ್ 10 ಕ್ಕೂ ಹೆಚ್ಚು ಕಾರ್ಯಕರ್ತರು  ಕಾಂಗ್ರೆಸ್ ಸೇರ್ಪಡೆ

ಕಾಪು: ಕಾಪು ಕ್ಷೇತ್ರ  ಫಲಿಮಾರು ವ್ಯಾಪ್ತಿಯ ಜೆಡಿಎಸ್ ಪಕ್ಷದ 10 ಕ್ಕೂ ಹೆಚ್ಚು ಕಾರ್ಯಕರ್ತರು ಕಾಪು ರಾಜೀವ ಭವನದಲ್ಲಿ  ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಜೆಡಿಎಸ್ ಪಕ್ಷದ  ಫಲಿಮಾರು ಗ್ರಾಮೀಣ ಸಮಿತಿ ಅಧ್ಯಕ್ಷ ರಾದ ಹುಸೇನ್ ಇಲಿಯಾಸ್ ನೇತ್ರತ್ವದಲ್ಲಿ ಸೇರ್ಪಡೆ ಯಾದ ಕಾರ್ಯಕರ್ತರನ್ನ  ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು.

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ,ಕಾಂಗ್ರೆಸ್  ಮುಖಂಡರಾದ ಎಂ. ಎ. ಗಫೂರ್, ದಿನೇಶ್ ಕೋಟ್ಯಾನ್, ಫಲಿಮಾರು ಗೋಪಾಲ ಪೂಜಾರಿ, ಆಸೀಫ್ ಎರ್ಮಾಳ್ ಮೊದಲಾದವರು ಉಪಸ್ಥಿತರಿದ್ದರು.


Spread the love