ಮುದರಂಗಡಿ: 62 ಲಕ್ಷ ರೂ ಕಾಮಗಾರಿಗೆ ಸಚಿವ ವಿನಯ್ ಕುಮಾರ್ ಸೊರಕೆ ಚಾಲನೆ

Spread the love

ಉಡುಪಿ : ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 62 ಲಕ್ಷ ರೂ ಮೊತ್ತದ ವಿವಿಧ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಬುಧವಾರ ಚಾಲನೆ ನೀಡಿದರು.

sorake-devlopment-works-20160519 sorake-devlopment-works-20160519-1 sorake-devlopment-works-20160519-2 sorake-devlopment-works-20160519-3 sorake-devlopment-works-20160519-4

ಪಿಲಾರು ಗ್ರಾಮದಲ್ಲಿ ಗ್ರಾಮ ವಿಕಾಸ ಯೋಜನೆಯಡಿ ಸುಮಾರು 20 ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಿದರು. 8 ಲಕ್ಷ ರೂ ಮೊತ್ತದ ಪಿಲಾರು-ಪ್ರಿನ್ಸ್ ಪಾಯಿಂಟ್-ಕುಂಜಿಗುಡ್ಡೆ ರಸ್ತೆ ಅಭಿವೃದ್ಧಿ, 4.10 ಲಕ್ಷ ರೂ ಮೊತ್ತದ ರಸ್ತೆ ಅಭಿವೃದ್ಧಿ, ಸಾಂತೂರು ಗ್ರಾಮದಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಒಂದು ಸೇತುವೆ, 6 ಲಕ್ಷ ವೆಚ್ಚದ ಕೊರಗರ ಪುರ್ನವಸತಿ ಕೇಂದ್ರಕ್ಕೆ ಹೋಗುವ ರಸ್ತೆ, 40 ಲಕ್ಷ ವೆಚ್ಚದ ಕಿಂಡಿ ಅಣೆಕಟ್ಟು, 4 ಲಕ್ಷ ಮೊತ್ತದ ಪಿಲಾರ್ ಪಾಯಿಂಟ್ ರಸ್ತೆ ಕಾಂಕ್ರಿಟೀಕರಣ, 9 ಲಕ್ಷ ರೂ ಮೊತ್ತದ ಕಿರು ಸೇತುವೆ ನಿರ್ಮಾಣ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆಯನ್ನು ಸಚಿವರು ನೆರವೇರಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮುದರಂಗಡಿ ಗ್ರಾ.ಪಂ. ಅಧ್ಯಕ್ಷ ಡೇವಿಡ್ ಡಿಸೋಜಾ, ಉಪಾಧ್ಯಕ್ಷ ಸುಕುಮಾರ್, ತಾಲೂಕು ಪಂಚಾಯತ್ ಸದಸ್ಯ ಮೈಕಲ್, ಹಾಗೂ ಪಂಚಾಯತ್ ನ ಸದಸ್ಯರು ಮತ್ತು ಲೋಕೋಪಯೋಗಿ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು, ದಿವಾಕರ ಶೆಟ್ಟಿ ಮತ್ತಿತರರು ಹಾಜರಿದ್ದರು.
ನಂತರ ಕುತ್ಯಾರು ಗ್ರಾ.ಪಂ. ವ್ಯಾಪ್ತಿಯಲ್ಲಿ , 20 ಲಕ್ಷ ಕಳತ್ತೂರು ಗರಡಿ ರಸ್ತೆ ಅಭಿವೃದ್ಧಿ ಕಾಮಗಾರಿ , 10 ಲಕ್ಷ ಮೊತ್ತದ ರಸ್ತೆ ಕುತ್ಯಾರು ಮಾಗಂದಡಿ ಪ.ಜಾತಿ ಕಾಲನಿ ಅಭಿವೃದ್ಧಿ ಕಾಮಗಾರಿಗೆ ಸಚಿವರು ಚಾಲನೆ ನೀಡಿದರು. ಎಪಿಎಂಸಿಯ ಸುಧಾಮ ಶೆಟ್ಟಿ, ಗರಡಿ ಮುಖ್ಯಸ್ಥ ವಿಶ್ವನಾಥ ಅಮೀನ್ ಉಪಸ್ಥಿತರಿದ್ದರು.


Spread the love