ಮುದಾಸಿರ್ ಕೊಲೆ ಯತ್ನ ಆರೋಪಿಗಳ ಬಂಧನ

Spread the love

ಮುದಾಸಿರ್ ಕೊಲೆ ಯತ್ನ ಆರೋಪಿಗಳ ಬಂಧನ

ಮಂಗಳೂರು: ಸುರತ್ಕಲ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ದೀಪಕ್ ರಾವ್ ಕೊಲೆಗೆ ಪ್ರತಿಕಾರವಾಗಿ ಜನವರಿ 3 ರಂದು ಮಂಗಳೂರು ನಿವಾಸಿ ಮುದಾಸಿರ್ ಎಂಬವರ ಕೊಲೆಗೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪಣಂಬೂರು ಉತ್ತರ ಉಪ ವಿಭಾಗದ ರೌಡಿ ನಿಗ್ರಹದಳ ಯಶಸ್ವಿಯಾಗಿದೆ.

ಬಂಧಿತರನ್ನು ಸುರತ್ಕಲ್ ನಿವಾಸಿ ಯಶೋಧರ (20), ಪ್ರೀತಂ ಅಲಿಯಾಸ್ ಗೌಡಪ್ಪ (20) ಎಂದು ಗುರುತಿಸಲಾಗಿದೆ.

ಜನವರಿ 3 ರಂದು ಸುರತ್ಕಲ್ ಬಳಿಯಲ್ಲಿ ನಿಂತುಕೊಂಡಿದ್ದ ಸಂದರ್ಭ ಹೆಲ್ಮೆಟ್ ಧರಿಸಿ ಮೋಟಾರ್ ಸೈಕಲಿನಲ್ಲಿ ಬಂದು ಹಲ್ಲೆಗೈದು ಪರಾರಿಯಾಗಿದ್ದ ಆರೋಪಿಗಳ ಪತ್ತೆಯ ಬಗ್ಗೆ ಪಣಂಬೂರು ಪೋಲಿಸ್ ನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಅದರಂತೆ ಜನವರಿ 10 ರಂದು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಮುಂದಿನ ಕ್ರಮಕ್ಕೆ ಸುರತ್ಕಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಪಣಂಬೂರು ಠಾಣ ಪೊಲೀಸ್ ನಿರೀಕ್ಷಕರಾದ ರಫೀಕ್ ಕೆ ಎಮ್ ಇವರ ನೇತೃತ್ವದ ರೌಡಿ ನಿಗ್ರಹದಳದ ಅಧಿಕಾರಿಗಳಾದ ಎಎಸ್ ಐ ಮೊಹಮ್ಮದ್, ಕುಶಲ ಮಣಿಯಾಣಿ, ಸತೀಶ್, ಇಸಾಕ್, ಕೃಷ್ಣ ಬಿಕೆ, ವಿಜಯ ಕಾಂಚನ್, ರಾಜ, ಶರಣ್ ಕಾಳಿ, ಚಂದ್ರಹಾಸ್ ಆಳ್ವ ಮತ್ತು ರಾಧಾಕೃಷ್ಣ ಭಾಗವಹಿಸಿದ್ದರು.


Spread the love