ಮೂಡುಬಿದ್ರೆ: ಕಾಲೇಜು ವಿದ್ಯಾರ್ಥಿನಿ ನಾಪತ್ತೆ

Spread the love

ಮೂಡುಬಿದ್ರೆ: ಕಾಲೇಜು ವಿದ್ಯಾರ್ಥಿನಿ ನಾಪತ್ತೆ

ಮಂಗಳೂರು: ಮೂಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾ ಸಂಸ್ಥೆಯಲ್ಲಿ ಪ್ರಥಮ ವರ್ಷದ ಬಿ.ಪಿ.ಟಿ ವಿಧ್ಯಾಭ್ಯಾಸ ಮಾಡಿಕೊಂಡಿದ್ದ ಆದಿರ (19 ವರ್ಷ) ಎಂಬ ಯುವತಿಯು ಫೆ.23 ರಿಂದ ಕಾಣೆಯಾಗಿರುವ ಬಗ್ಗೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಾಣೆಯಾದ ದಿನ ಸಂಸ್ಥೆಯ ಶಾಂಭವಿ ಹಾಸ್ಟೆಲಿನಿಂದ ಕಾಲೇಜಿಗೆಂದು ಬಸ್ಸಿನಲ್ಲಿ ಹೋದವಳು ಕಾಲೇಜಿಗೆ ವಾಪಸ್ಸು ಹೋಗದೆ ನಾಪತ್ತೆಯಾಗಿದ್ದಾಳೆ.

ಚಹರೆ: ಬಿಳಿ ಮೈ ಬಣ್ಣ, 5ಅಡಿ 2ಇಂಚು ಎತ್ತರ, ಕಪ್ಪು ತಲೆ ಕೂದಲು, ದುಂಡು ಮುಖ, ಸಾಧಾರಣ ಶರೀರ ಹೊಂದಿದ್ದು, ಆಕಾಶ ನೀಲಿ ಬಣ್ಣದ ಟಾಪ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ.

ಕಾಣೆಯಾದ ಯುವತಿಯ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ಮೂಡಬಿದ್ರೆ ಪೊಲೀಸು ಠಾಣೆ ದೂರವಾಣೆ ಸಂಖ್ಯೆ: 08258-236333, ಪೊಲೀಸು ಆಯುಕ್ತರು 0824-2220801, 2220800 ಸಂಪರ್ಕಿಸುವಂತೆ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love