ಮೂಲ್ಕಿ : ಮನೆ ದರೋಡೆ ಮತ್ತು ಮಹಿಳೆಯನ್ನು ಕೊಲೆ ಮಾಡಿದ ಐವರು ಆರೋಪಿಗಳ ಬಂಧನ

Spread the love

ಮೂಲ್ಕಿ : ಮನೆ ದರೋಡೆ ಮತ್ತು ಮಹಿಳೆಯನ್ನು ಕೊಲೆ ಮಾಡಿದ ಐವರು ಆರೋಪಿಗಳ ಬಂಧನ

ಮಂಗಳೂರು : ಮನೆ ಒಂದರಲ್ಲಿ ದರೋಡೆ ನಡೆಸಿ ಹತ್ಯೆ ಮಾಡಿ ಮತ್ತು ಅದೇ ಪರಿಸರದಲ್ಲಿ ಕೆಲವು ಮನೆಗಳಲ್ಲಿ ದರೋಡೆ ಮಾಡಿ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಗಳನ್ನು  ಮೂಲ್ಕಿ ಪೊಲೀಸರು ಬಂಧಸಿದ್ದಾರೆ.

ಬಂಧಿತ ಆರೋಪಿಗಳನ್ನು ಶೌಖತ್ ಅಲಿ ಬಜ್ಪೆ,ಅನ್ಸಾರ್ ಯಾನೆ ಅಂನ್ಚು ಕೊಲ್ನಾಡ್,ಮೇಘರಾಜ್ ಹಳೆಯಂಗಡಿ,ಜಾಕಿರ್ ಹುಸೇನ್ ಬಿ.ಸಿ.ರೋಡ್,ಅನ್ಸಾರ್ ಪಡುಬಿದ್ರಿ ಎಂದು ಗುರುತಿಸಲಾಗಿದೆ.

ಮೂಲ್ಕಿ ಠಾಣಾ ವ್ಯಾಪ್ತಿಯ 2017 ರಲ್ಲಿ ಐಕಳ ಸುಧಾಮ ಶೆಟ್ರ ಮನೆಯಲ್ಲಿ ದರೋಡೆ ಮಾಡಿ ಅವರ ಧರ್ಮಪತ್ನಿಯಾದ ವಸಂತಿ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆ ಮಾಡಿದಂತಹ ಹಾಗೂ ಪಕ್ಷಿಕೆರೆ ಕುಪ್ಪು ಸ್ವಾಮಿಯವರ ಪತ್ನಿಯ ಚಿನ್ನವನ್ನು ಲೂಟಿಮಾಡಿದ ಹಾಗೂ ಕೊಲ್ನಾಡ್ ಪ್ರಭಾಕರ್ ಶೆಟ್ರ ಮನೆಯಲ್ಲಿ ಅವರ ಹೆಂಡತಿಯ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಹಾಗೂ ದರೋಡೆಯನ್ನು ಮಾಡಿದ ಕುಖ್ಯಾತ ದರೋಡೆಕೋರರಾದ ಶೌಕತ್ ಆಲಿ ಮತ್ತು ಆತನ ಸಹಚರರಾದ ಐದು ಮಂದಿಯನ್ನು ಬಂಧಿಸಿದ ಮೂಲ್ಕಿಯ ಠಾಣಾಧಿಕಾರಿ ಅನಂತ ಪದ್ಮನಾಭ ಅವರ ನೇತ್ರತ್ವದ ಪೊಲೀಸ್ ತಂಡ ಬಂಧಿಸಿದೆ.

ಆರೋಪಿಗಳು ಮುಲ್ಕಿ, ಹಳೆಯಂಗಡಿ, ಕಿನ್ನಿಗೋಲಿ ಪರಿಸರದಲ್ಲಿ ನಡೆದ ಕೊಲೆ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಪೊಲೀಸರು ಬಂಧಿತ ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.


Spread the love