ಮೆಲ್ವಿನ್ ಪೆರ್ನಾಲ್ ಅವರ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ

Spread the love

ಮೆಲ್ವಿನ್ ಪೆರ್ನಾಲ್ ಅವರ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ

ಉಡುಪಿ: ನಿಟ್ಟೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಮೆಲ್ವಿನ್ ಕ್ಯಾಸ್ತಲಿನೊ ಪೆರ್ನಾಲ್ ಇವರು ಬರೆದಿರುವ “Optimization of Equal Channel Angular Pressing Process for improved Properties of a Biomedical Material and Experimental Validation” ಪ್ರಬಂಧಕ್ಕೆ ಬೆಳಗಾವಿ ವಿಶ್ವೇಶ್ವಯ್ಯ ತಾಂತ್ರಿಕ ವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ.

ಅವರು ಈ ಮೊದಲು ಕೆಪಿಟಿಯಲ್ಲಿ ಡಿಪ್ಲೋಮಾ ಪದವಿಯನ್ನು ಪಡೆದು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು, ಮಂಗಳೂರು ಇಲ್ಲಿ ಲ್ಯಾಬ್ ಟೆಕ್ನಿಶೀಯನ್ ಆಗಿ ಸೇವೆಗೆ ಸೇರಿದ್ದು, ಬಳಿಕ ಪಿಎ ಇಂಜಿನಿಯರಿಂಗ್ ಕಾಲೇಜು ಹಾಗೂ ಸಹ್ಯಾದ್ರಿ ಇಂಜಿನಿಯರಿಂತ್ ಕಾಲೇಜನಲ್ಲಿ ಸೇವೆ ಸಲ್ಲಿಸಿದ್ದಾರೆ. ಈ ವೇಳೆ ಅವರು ಉನ್ನತ ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೊಂದಿ 2011 ರಲ್ಲಿ ಇಂಜಿನಿಯರಿಂಗ್ ಪದವಿ ಮೊದಲ ರ್ಯಾಂಕ್ ನಲ್ಲಿ ಮುಗಿಸಿದ್ದಾರೆ.

ಬಳಿಕ ಬಂಟಕಲ್ ಮಧ್ವವಾದಿರಾಜ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದು ಬಳಿಕ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂ ಟೆಕ್ ಪದವಿಯನ್ನು 2014ರಲ್ಲಿ ಪಡೆದರು. ಪ್ರಸ್ತುತ ಪಿಹೆಚ್ ಡಿ ಪದವಿಯನ್ನು ಪಡೆದಿದ್ದು ಅದೇ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಾಧ್ಯಾಪಕ ಹುದ್ದೆಯೊಂದಿಗೆ ಉತ್ತಮ ಕಾರ್ಯ ನಿರ್ವಾಹಕರಾಗಿರುವ ಮೆಲ್ವಿನ್ ಕ್ಯಾಸ್ತಲಿನೊ ಅವರು ಉತ್ತಮ ಬರಹಗಾರರಾಗಿದ್ದು ಅವರ ಲೇಖನ, ಕಥೆ, ಕವಿತೆಗೆಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.


Spread the love