ಮೇಯರ್ ನೇತೃತ್ವದಲ್ಲಿ ಮಂಗಳೂರಿನ ಮಾಂಸದಂಗಡಿಗಳ ಪರಿಶೀಲನೆ

Spread the love

ಮೇಯರ್ ನೇತೃತ್ವದಲ್ಲಿ ಮಂಗಳೂರಿನ ಮಾಂಸದಂಗಡಿಗಳ ಪರಿಶೀಲನೆ

ಮಂಗಳೂರು: ಮಾಂಸ ಮಾರಾಟಕ್ಕೆ ಸಂಬಂಧಿಸಿ ಮಂಗಳೂರು ಮಹಾನಗರ ಪಾಲಿಕಗೆ ಬಂದ ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಮಂಗಳೂರು ಮೇಯರ್ ದಿವಾಕರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಬುಧವಾರ ಬೆಳಿಗ್ಗೆ ನಗರದ ಕೆಲವು ಮಾಂಸದಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

ನಗರದ ಉರ್ವಾ, ಉರ್ವಾ ಸ್ಟೋರ್ ಮತ್ತು ಕುದ್ರೋಳಿ ಕಸಾಯಿ ಖಾನೆಗೆ ಭೇಟಿ ನೀಡಿದ ಮೇಯರ್ ಮತ್ತು ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದರು. ಪ್ರತಿ ಮಾಂಸದಂಗಡಿಯಲ್ಲಿ ಪ್ರತಿನಿತ್ಯ ಎಷ್ಟು ಆಡು ಕುರಿ ಕಡಿಯಲಾಗುತ್ತದೆ ಎಂಬ ಮಾಹಿತಿಯನ್ನು ಇಟ್ಟುಕೊಳ್ಳುವಂತೆ ಮೇಯರ್ ಅಂಗಡಿಯವರಿಗೆ ಸೂಚನೆ ನೀಡಿದರು. ಅಕ್ರಮವಾಗಿ ಮಾಂಸ ಮಾರಾಟ ಕಂಡುಬಂದಲ್ಲಿ ಪರವಾನಿಗೆ ರದ್ದು ಪಡಿಸುವುದಾಗಿ ಮೇಯರ್ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮನಾಪಾ ಸದಸ್ಯರಾದ ಪೂರ್ಣಿಮಾ, ಕಿರಣ ಕುಮಾರ್, ಸುಧೀರ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.


Spread the love