ಮೇ31: ರಾಜ್ಯದಲ್ಲಿ ಕಂಪ್ಲೀಟ್ ಲಾಕ್ ಡೌನ್ ಇರಲ್ಲ – ಮುಖ್ಯಮಂತ್ರಿ ಯಡ್ಯೂರಪ್ಪ

Spread the love

ಮೇ31: ರಾಜ್ಯದಲ್ಲಿ ಕಂಪ್ಲೀಟ್ ಲಾಕ್ ಡೌನ್ ಇರಲ್ಲ – ಮುಖ್ಯಮಂತ್ರಿ ಯಡ್ಯೂರಪ್ಪ

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಪ್ರತಿ ಭಾನುವಾರ ರಾಜ್ಯಾದ್ಯಂತ ಮಾಡಲಾಗಿದ್ದ ಸಂಪೂರ್ಣ ಲಾಕ್ಡೌನ್ ಸಡಿಲಗೊಳಿಸಿ ರಾಜ್ಯ ಸರಕಾರ ಘೋಷಣೆ ಮಾಡಿದೆ.

ಭಾನುವಾರ ರಾಜ್ಯದಲ್ಲಿ ಯಾವುದೇ ಸಂಪೂರ್ಣ ಲಾಕ್ಡೌನ್ ಇಲ್ಲ. ಎಂದಿನಂತೆ ಎಲ್ಲಾ ಚಟವಟಿಕೆಗಳು ಇರಲಿದೆ ಎಂದು ಸಿಎಂ ಕಚೇರಿಯಿಂದ ಅಧಿಕೃತವಾಗಿ ಫೊಷಣೆಯಾಗಿದೆ.

ಪ್ರತಿದಿನದಂತೆ ಭಾನುವಾರ ಬಸ್ ಸಂಚಾರ ಇರಲಿದ್ದು ಕೆ ಎಸ್ ಆರ್ ಟಿ ಸಿ, ಬಿ ಎಮ್ ಟಿಸಿ ಬಸ್ಸುಗಳು ಎಂದಿನಂತೆ ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೂ ಸಂಚಾರ ಮಾಡಲಿದೆ. ಅಲ್ಲದೆ ಅಂತರ್ ರಾಜ್ಯ ಸಂಚಾರ ಕೂಡ ಇರಲಿದ್ದು, ಜೊತೆಗೆ ಆಟೋ, ಕ್ಯಾಬ್ ಎಲ್ಲಾ ಸಂಚಾರ ವ್ಯವಸ್ಥೆ ಕೂಡ ಇರಲಿದೆ.

ಹೊಟೇಲ್, ಸಲೂನ್, ತರಕಾರಿ, ದಿನಸಿ, ಬ್ಯೂಟಿ ಪಾರ್ಲರ್ ಸೇರಿದಂತೆ ಎಲ್ಲಾ ಅಂಗಡಿಗಳು ತೆರೆದಿರುತ್ತದೆ. ಅದೇ ರೀತಿ ಹೋಟೆಲಿನಲ್ಲಿ ಪಾರ್ಸೆಲ್ ಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು ಮದ್ಯದಂಗಡಿಗಳು ಕೂಡ ಒಪನ್ ಇರಲಿವೆ.


Spread the love