ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರ ಬಿಜೆಪಿ ರೂಪಿಸಿದೆ : ವಿನಯ್ ಕುಮಾರ್ ಸೊರಕೆ

ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರ ಬಿಜೆಪಿ ರೂಪಿಸಿದೆ : ವಿನಯ್ ಕುಮಾರ್ ಸೊರಕೆ

ಉಡುಪಿ: ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರವನ್ನು ಬಿಜೆಪಿ ರೂಪಿಸಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಪಕ್ಷದ ಉಡುಪಿ ಜಿಲ್ಲಾ ಘಟಕವು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಬಿಜೆಪಿ ಕುದುರೆ ವ್ಯಾಪಾರ ಮಾಡಿದಂತೆ ಶಾಸಕರನ್ನು ನೂರಾರು ಕೋಟಿಗಳ ಲೆಕ್ಕದಲ್ಲಿ ಖರೀದಿಸುತ್ತಿದೆ. ಕೋಟಿಗಳ ಲೆಕ್ಕದಲ್ಲಿ ಆಮಿಷ ಒಡ್ಡುತ್ತಿದೆ ಎಂದರು

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಕಾಂಗ್ರಸ್ ನಾಯಕರಾದ ವಿಶ್ವಾಸ್ ಅಮೀನ್, ಗೀತಾ ವಾಗ್ಳೆ, ಹರೀಶ್ ಕಿಣಿ, ರೋಶನಿ ಒಲಿವೇರಾ, ನಾಗೇಶ್ ಉದ್ಯಾವರ, ಡಾ|ಸುನಿತಾ ಶೆಟ್ಟಿ,ಕಿರಣ್ ಕುಮಾರ್ ಉದ್ಯಾವರ, ಸರಳಾ ಕಾಂಚನ್, ಸುನೀಲ್ ಬಂಗೇರಾ, ಸರಸು ಡಿ ಬಂಗೇರಾ, ಪ್ರಶಾಂತ್ ಜತ್ನನ್ನ, ಕಿಶನ್ ಹೆಗ್ಡೆ ಕೊಳಕೆಬೈಲು ಹಾಗೂ ಇತರರು ಉಪಸ್ಥಿತರಿದ್ದರು.