ಮೈಸೂರು ಇಬ್ರಾಹಿಂ ಸ್ಮರಣಾರ್ಥ  190ನೇ ಬೃಹತ್ ರಕ್ತದಾನ ಶಿಬಿರ

ಮೈಸೂರು ಇಬ್ರಾಹಿಂ ಸ್ಮರಣಾರ್ಥ  190ನೇ ಬೃಹತ್ ರಕ್ತದಾನ ಶಿಬಿರ

ಮಂಗಳೂರು: ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಆಶ್ರಯದಲ್ಲಿ 190ನೇ ಬೃಹತ್ ರಕ್ತದಾನ ಶಿಬಿರವು ದಿವಂಗತ ಮೈಸೂರು ಇಬ್ರಾಹಿಂ ಸ್ಮರಣಾರ್ಥ ಜುಲೈ 14 ಆದಿತ್ಯವಾರ ದಂದು ಮಹದನುಲ್ ಉಲೂಮ್ ಮದ್ರಸ ಮಂಜನಾಡಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಹಬಾಗಿತ್ವದಲ್ಲಿ ನಡೆಯುವ ಈ ರಕ್ತದಾನ ಶಿಬಿರವು ಬೆಳಿಗ್ಗೆ 9ರಿಂದ ಮದ್ಯಾಹ್ನ 1ರ ವರೆಗೆ ನಡೆಯಲಿದೆ.

ರಕ್ತದಾನ ಶಿಬಿರಕ್ಕೆ ಮುನ್ನ ನಡೆಯುವ ಸಭಾ ಕಾರ್ಯಕ್ರಮಕ್ಕೆ ಅಬ್ದುಲ್ ಅಝೀಝ್(ಮೈಸೂರ್ ಬಾವ)ಉದ್ಯಮಿ, ಕರ್ನಾಟಕ ವಸ್ತು ಪ್ರದರ್ಶನ ಮಂಡಳಿ ಕರ್ನಾಟಕ ಸರಕಾರ,ಹಾಗೂ ಧಾರ್ಮಿಕ ಪಂಡಿತರು,ಜನ ಪ್ರತಿನಿಧಿಗಳು,ಖ್ಯಾತ ವೈದ್ಯರುಗಳು,ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳುವರೆಂದು ಬ್ಲಡ್ ಡೋನರ್ಸ್ ಮಂಗಳೂರು(ರಿ) ತಂಡವು ಮಾಧ್ಯಮಕ್ಕೆ ತಿಳಿಸಿದೆ.