ಮೊಬೈಲ್ ಕವರಿನಲ್ಲಿ ತುಳಸಿ ದಳ ಇಡಿ, ರೇಡಿಯೇಶನ್ ದುಷ್ಪರಿಣಾಮ ತಪ್ಪಿಸಿ – ಬಾಬಾ ರಾಮ್ ದೇವ್!

ಮೊಬೈಲ್ ಕವರಿನಲ್ಲಿ ತುಳಸಿ ದಳ ಇಡಿ, ರೇಡಿಯೇಶನ್ ದುಷ್ಪರಿಣಾಮ ತಪ್ಪಿಸಿ – ಬಾಬಾ ರಾಮ್ ದೇವ್!

ಉಡುಪಿ: ಮೊಬೈಲ್ ಕವರಿನ ಒಳಗಡೆ ಒಂದು ತುಳಸಿ ಕೊಡಿ ಇಡುವುದರಿಂದ ರೇಡಿಯೇಶನ್ ದುಷ್ಪರಿಣಾಮ ತಪ್ಪಿಸಬಹುದು ಎಂದು ಯೋಗ ಗುರು ಬಾಬಾ ರಾಮ್ ದೇವ್ ಉಡುಪಿಯಲ್ಲಿ ಶನಿವಾರ ಘೋಷಣೆ ಮಾಡಿದ್ದಾರೆ.

ಉಡುಪಿ ಪರ್ಯಾಯ ಪಲಿಮಾರು ಮಠ, ಶ್ರೀಕೃಷ್ಣ ಮಠ ಹಾಗೂ ಪತಂಜಲಿ ಯೋಗ ಪೀಠ(ಟ್ರಸ್ಟ್ ಹರಿದ್ವಾರದ ನೇತೃತ್ವದಲ್ಲಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಯೋಗ ಗುರು ಬಾಬಾ ರಾಮ್ದೇವ್ ಅವರಿಂದ ನ.16ರಿಂದ 20ರವರೆಗೆ ಬೃಹತ್ ಯೋಗ ಶಿಬಿರಕ್ಕೆ ಯೋಗ ಗುರು ಬಾಬಾ ರಾಮ್ದೇವ್ ಶನಿವಾರ ಚಾಲನೆ ನೀಡಿದ ಬಳಿಕ ಮಾತನಾಡಿದರು.

ನಮ್ಮ ದೇಹಕ್ಕೆ ಅತೀ ಅಪಾಯಕಾರಿಯಾದ ಮೊಬೈಲ್ ಗಳ ವಿಕಿರಣಗಳ ದುಷ್ಪರಿಣಾಮಗಳನ್ನು ತಡೆಯಲು ಮೊಬೈಲ್ ನ ಹಿಂಬದಿಯ ಕವರ್ ನ ಒಳಗೆ ಒಂದು ತುಳಸಿ ಕೊಡಿಯನ್ನು ಇಡಿ….ತುಳಸಿ ಎಲೆ ಗೆ ಮೊಬೈಲ್ ಮಾತ್ರವಲ್ಲದೇ ನಾವು ಬಳಸುವ ಯಾವುದೇ ಇಲೆಕ್ಟ್ರಾನಿಕ್ ಉತ್ಪನ್ನಗಳ ವಿಕಿರಣ ದುಷ್ಪರಿಣಾಮಗಳನ್ನು ತಡೆಯುವ ಅದ್ಭುತ ಶಕ್ತಿ ಇದೆ ಆದ್ದರಿಂದ ಪ್ರತೀ ಮನೆ ಕಚೇರಿಗಳಲ್ಲಿ ( ಇಲೆಕ್ಟ್ರಾನಿಕ್ ಉತ್ಪನ್ನಗಳನ್ನು ಬಳಸುವ ಸ್ಥಳಗಳಲ್ಲಿ) ಸಾಧ್ಯವಾದಷ್ಟು ತುಳಸಿ ಸಸಿಗಳನ್ನು ಬೆಳೆಸಿರಿ ಎಂದು ಕರೆ ನೀಡಿದರು.