ಮೊಬೈಲ್ ಕ್ಯಾಂಟೀನ್ ನಡೆಸುತ್ತಿದ್ದ ಮಹಿಳೆಗೆ ಹಲ್ಲೆ ಯತ್ನ;ದೂರು ದಾಖಲು

Spread the love

ಮೊಬೈಲ್ ಕ್ಯಾಂಟೀನ್ ನಡೆಸುತ್ತಿದ್ದ ಮಹಿಳೆಗೆ ಹಲ್ಲೆ ಯತ್ನ;ದೂರು ದಾಖಲು

ಮಂಗಳೂರು:ಮೊಬೈಲ್ ಕ್ಯಾಂಟೀನ್ ನಡೆಸುತ್ತಿದ್ದ ಮಹಿಳೆಗೆ ಹಲ್ಲೆ ಮಾಡಲು ಯತ್ನಿಸಿದ ದುಷ್ಕರ್ಮಿಗಳು ಓಮ್ನಿ ಕಾರು ಹಾಗೂ ಸೊತ್ತು ನಾಶ ಮಾಡಿದ ಘಟನೆ ನಗರದ ಎಜೆ ಆಸ್ಪತ್ರೆ ಸಮೀಪ ರವಿವಾರ ನಡೆದಿದೆ.

ಓಮ್ನಿ ಕಾರಿನಲ್ಲಿ ಕ್ಯಾಂಟಿನ್ ನಡೆಸುತ್ತಿದ್ದ ಮಹಿಳೆಯನ್ನು ಕಮಲಾಕ್ಷಿ ಎಂದು ಗುರುತಿಸಲಾಗಿದೆ.
ಕಮಲಾಕ್ಷಿ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ, ಪತಿಯನ್ನು ಕಳೆದುಕೊಂಡಿದ್ದಾರೆ. ಜೀವನ ನಿರ್ವಹಣೆಗಾಗಿ ಸುಮಾರು 2 ವರ್ಷಗಳಿಂದ ಕ್ಯಾಂಟಿನ್ ನಡೆಸುತ್ತಿದ್ದು, ಹಲ್ಲೆಗೆ ಯತ್ನಿಸಿದ ದುಷ್ಕರ್ಮಿಗಳು ಓಮ್ನಿ ಕಾರು ಹಾಗೂ ಕಾರಿನಲ್ಲಿದ್ದ ಸೊತ್ತುಗಳನ್ನು ನಾಶ ಮಾಡಿದ್ದಾರೆ ಎಂದು ದೂರಿದ್ದಾರೆ.

ಈ ಕುರಿತು ಕಮಲಾಕ್ಷಿ ಅವರು ಕದ್ರಿ ಠಾಣೆಯಲ್ಲಿ ದೂರು ನೀಡಿದ್ದಾರೆ.


Spread the love